ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ
ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1
ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2
ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3
***