ಚಾಮರವನು ಹಾಕಿರೆ ಕೋಮಲಾಂಗಿಯರುಶ್ರೀ ಮಹಾಮಾರುತನ ಸ್ಮರಿಸುತ ನೀವೆಲ್ಲರು ಪ.
ರಾಮ ನರಹರಿ ಕೃಷ್ಣ ಶ್ರೀಮಹಿಧರಗೆಇಹ ಆಲದೆಲೆಯ ಮೇಲಿದ್ದು ಕ್ರೀಡಿಪಗೆ ಅ.ಪ.
ಮುತ್ತಿನ ಮಾಲೆಗಳು ಸುತ್ತ ಶೋಭಿಪವುನಕ್ಷತ್ರಮಾಲೆ ವಿಚಿತ್ರ ಶೋಭಿಪುದುರತ್ನ ಪೀಠಗಳಿಂದ ನೀಲಹತ್ತಿಕುಳಿತಿಹ ಗೋಪಿ ಪುತ್ರಗೆ ನೀವು 1
ರಾಮ ಕುಳಿತಿರುವ ನಿಜ ಕಾಮಿನಿಯ ಸಹಿತಶ್ರೀ ಮಹೀ ಸಹಿತ ಭೂಮಿಧರನುತಾತಾಮಸರ ನಯನ ಮುನಿ ಕಾಮಿನಿವರ ಪ್ರೀತಶ್ರೀಮಲಸಹಾರ ಸಿರಿಧಾಮ ವಿಖ್ಯಾತ 2
ಸುಂದರಾಂಗಿಯರು ತ್ವರದಿಂದ ಪಾಡುತಲಿಮಂದಾಕಿನಿಯರ ಪ್ರಮುಖರಿಂದ ಸರತಿಗಳೇಮಂದಹಾಸ್ಯಗಳ ಮುಖದಿಂದ ನೋಡುತಲಿಇಂದಿರೇಶನ ಹತ್ತಿರ ಹೊಂದಿ ನಿಲ್ಲುತ್ತಲೆ3
****