..
kruti by rukmangadaru
ನಾಳಿಗಿಲ್ಲವೆಂದು ವ್ಯರ್ಥ ಬಳಲ ಬೇಡಿರೋ |ಕಾಲ ಬೆಳಗು ನೆಚ್ಚಿ ಕೇಡು | ತಿಳಿದು ನೋಡಿರೋ ಪ
ಅಂದಿಗಿದ್ದವರಿಗೆ ಸಾವು | ಇಂದಿಗಿದ್ದವರಿಗೆ ಸಾವು |ಇಂದಿರೇಶನ ಭಕುತರೆಂದೆಂದಿಗೆ ಸಾಯರೋ 1
ಆರಿಗಾರು ಕೊಡುವರಲ್ಲ | ಮೋರೆ ನೋಡಿ ನಗುವರಲ್ಲ |ಹರಿಗೆ ನಂಬಿದವರೇ ಪರಮ ಧೀರ ಧೂರ್ತರೋ 2
ಹೆತ್ತ ತಾಯಿ ಗರ್ಭದಲ್ಲಿ | ಹತ್ತು ತಿಂಗಳನ್ನಪಾನ- |ವಿತ್ತ ರುಕ್ಮಭೂಷಗೇತಕ್ಕೆ ಮರೆತಿರೋ 3
***