Showing posts with label ನೋಡು ನೋಡು ದಯಮಾಡು ಮಾಡಿನ್ನ prasannavenkata. Show all posts
Showing posts with label ನೋಡು ನೋಡು ದಯಮಾಡು ಮಾಡಿನ್ನ prasannavenkata. Show all posts

Wednesday, 13 November 2019

ನೋಡು ನೋಡು ದಯಮಾಡು ಮಾಡಿನ್ನ ankita prasannavenkata

by ಪ್ರಸನ್ನವೆಂಕಟದಾಸರು
ನೋಡು ನೋಡು ದಯಮಾಡು ಮಾಡಿನ್ನ ಪ.

ನೋಡುವೈರಾಗ್ಯಭಾಗ್ಯವಿಹೀನನಕಾಡುತಿದೆ ಮನ ಕರುಣಾಸಂಪನ್ನ ಅ.ಪ.

ಸ್ನಾನ ಸಂಧ್ಯಾವಂದನೆ ಸಚೇಲದಿಧ್ಯಾನ ಮೌನವ ಹಿಡಿಸಿಜ್ಞಾನ ಭಕ್ತಿ ವಿರಕ್ತಿ ಮಾತಿನನಾಣ್ನುಡಿಯಂತೆ ನುಡಿಸಿದಾನ ಧರ್ಮ ಕೈವಲ್ಯದಾರ್ಯೆಂದು ನಿದಾನ ತುಷ್ಟಿಯ ಬಡಿಸಿತಾನರೆಕ್ಷಣ ಸ್ವಸ್ಥವಿರದೆಲ್ಲಹಾನಿ ಮಾಡಿತೆನ್ನ ಚಿತ್ತವ ಕೆಡಿಸಿ 1

ಸಾಲಂಕೃತ ಬಾಲನೊಯ್ದಡವಿಯಲಿ ಕೊಲ್ವಆಲಯದ ಕಳ್ಳನಂತೆಬಾಲೆಯನ್ನಾಳದೆ ಷಂಡಘನಕೂಪದೊಳು ನೂಕಿಸುವಂತೆಪೇಳಲೇನು ದುರ್ಬಲರನು ಅರಸ ತಾಶೂಲಕಿಕ್ಕಿಸುವಂತೆಮೇಲೆ ಮೇಲೆ ದುರ್ವಿಷಯಾಟವಿಯೊಳುಕಾಲಕಟ್ಟ್ಯೆನ್ನ ಕೆಡಹುತಿದೆ2

ಕನ್ನಿಕೆಗೆ ವರನೊಪ್ಪಿದರೆ ತೆತ್ತಿಗನ್ನ ಪ್ರತಿಕೂಲವೇನುಪುಣ್ಯಶ್ಲೋಕನ ಅಭಯವಿರಲು ಸುಖಿಗನ್ಯ ತೊಡರ್ಯಾಕಿನ್ನಮನ್ನೆಯನ ಪಾದವಿಡಿದಿಹ ಮಡದಿಗೆಅನ್ಯರಾತಂಕವೇನು ಪ್ರಸನ್ನವೆಂಕಟಸ್ವಾಮಿ ನೀ ಒಲಿದರೆಕುನ್ನಿ ಮನ ಕಾಡಿ ಮಾಡುವದೇನು 3
********