ರಾಗ ಪಂತುವರಾಳಿ ತಾಳ ಆದಿ
just scroll down for other devaranama
ಸಿರಿ ನಿಲಯನ ಗುಣಗಳ ತಿಳಿದು ಭಜಿಸುವದೇ ॥ಪ॥
ಸ್ವೋಚಿತ ಕರ್ಮಗಳಾಚರಿಸುತ ಬಲು
ನೀಚರಲ್ಲಿ ಪೋಗಿ ಯಾಚಿಸದೇ ।
ಖೇಚರವಾಹ ಚರಾಚರ ಬಂಧಕ
ಮೋಚಕನಹುದೇಂದ್ಯೋಚಿಸುತಿಪ್ಪೋದೇ ॥೧॥
ನಿಚ್ಚಸುಭಕುತಿಯೋಳಚ್ಯುತನಂಘ್ರಿಗ
ಳರ್ಚಿಸಿ ಮೇಚ್ಚಿಸುತೇಚ್ಚರದಿ ।
ತುಚ್ಚವಿಷಯಗಳನಿಚ್ಚಿಸದಲೇ ಯ-
ದೃಚ್ಛಾಲಾಭದಿಂ ಪ್ರೋಚ್ಚನಾಗುವದೇ ॥೨॥
ಮನೋವಾಕ್ಕಾಯದೋಳನುಭವಿಸುವ
ದಿನದಿನದ ವಿಷಯಸಾಧನಗಳನು
ಅನಿಲಾಂತರ್ಗತ ವನರುಹದಳಲೋ-
ಚನಗರ್ಪಿಸಿ ದಾಸನು ನಾನೇಂಬೋದೇ ॥೩॥
ವಾಸವಮುಖವಿಬುಧಾಸುರನಿಚಯಕೇ
ವಾಸುದೇವನೇ ಶುಭಾಶುಭದ
ಈ ಸಮಸ್ತಜಗಕೀಶ ಕೇಶವಾ-
ನೀಶ ಜೀವರೇಂಬೀ ಸುಜ್ಞಾನವೇ ॥೪॥
ಪಂಚಭೇದಯುತ ಪ್ರಪಂಚ ಸತ್ಯ ವಿ-
ರಿಂಚಿಮುಖರು ಬಲಿವಂಚಕಗೇ
ಸಂಚಲ ಪ್ರತಿಮೇ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದಲಾಂಛನಾಗುವುದೇ ॥೫॥
ಪಂಚಕ್ರತುಗಳಲಿ ಪಂಚಾಗ್ನಿಗಳಲಿ
ಪಂಚಪಂಚರೂಪವ ತಿಳಿದು
ಪಂಚಸುಸಂಸ್ಕಾರರಾಂಚಿತನಾಗಿ
ದ್ವಿಪಂಚಕರಣದಲಿ ಪ್ರಪಂಚಕನರಿವುದೇ ॥೬॥
ಪಾತ್ರರ ಸಂಗಡ ಯಾತ್ರೇಯ ಚರಿಸಿ ವಿ-
ಧಾತೃಪಿತನ ಗುಣಸ್ತೋತ್ರಗಳ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೇದು ಪರತ್ರವ ಪಡೇವುದೇ ॥೭॥
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದಜಲ ನಿರ್ಮಾಲ್ಯವನೇ ಧರಿಸಿ ಕೋ-
ವಿದರ ಸದನ ಹೇಗ್ಗದವ ಕಾಯುವದೇ ॥೮॥
ಹಂಸಮೋದಲು ಹದಿನೇಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ-
ಪಾಂಸುವ ಧರಿಸಿ ಅಸಂಶಯನಪ್ಪುದೇ ॥೯॥
ವರಗಾಯತ್ರೀನಾಮಕ ಹರಿಗೀ-
ರೇರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧರೂಪವ ಸಾ-
ದರದಲಿ ಧ್ಯಾನಿಸಿ ನಿರುತ ಜಪಿಸುವದೇ ॥೧೦॥
ಬಿಗಿದ ಕಂಠದಿಂ ದೃಗ್ಬಾಷ್ಪಗಳಿಂ
ನಗೇಮೋಗದಿಂ ರೋಮಗಳೋಗೇದು
ಮಿಗೇ ಸಂತೋಷದಿ ನೇಗೇದಾಡುವ ನಾ-
ಲ್ಮೋಗನಯ್ಯನ ಗುಣ ಪೋಗಳಿ ಹಿಗ್ಗುವದೇ ॥೧೧॥
ಗೃಹಕರ್ಮವ ಬ್ಯಾಸರದಲೇ ಪರಮೋ-
ತ್ಸಾಹದಿ ಮಾಡುತ ಮೂಜಗದ
ಮಹಿತನ ಸೇವೇಯಿದೇನುತಲಿ ಮೋದದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೇ ।।೧೨॥
ಕ್ಲೇಶಾನಂದಗಳೀಶಾಧೀನ ಸ-
ಮಾಸಮ ಬ್ರಹ್ಮಸದಾಶಿವರು
ಈಶಿತವ್ಯರು ಪರೇಶನಲ್ಲದೇ
ಶ್ವಾಸಬಿಡುವ ಶಕ್ತಿ ಲೇಶವಿಲ್ಲೇಂಬೋದೇ ॥೧೩॥
ಆ ಪರಮಾತ್ಮಗೇ ರೂಪದ್ವಯವು
ಪರಾಪರತತ್ತ್ವಗಳಿದರೋಳಗೇ
ಸ್ತ್ರೀ-ಪುಂಭೇದದಿ ಈ ಪದ್ಮಾಂಡವ
ವ್ಯಾಪಿಸಿ ಇಹನೇಂದೀಪರಿ ತಿಳಿವುದೇ ॥೧೪॥
ಏಕೋತ್ತರ ಪಂಚಾಶದ್ವರ್ಣಗ-
ಳೇಕಾತ್ಮನ ನಾಮಂಗಳಿವು
ಮಾ ಕಮಲಾಸನ ಮೋದಲಾದಮರರು
ಸಾಕಲ್ಯದಿ ಇವನರಿಯರೇಂತೇಂಬುದೇ ॥೧೫॥
ಓಂದು ರೂಪದೋಳಗನಂತರೂಪಗಳು
ಪೋಂದಿಪ್ಪವು ಗುಣಗಣಸಹಿತ
ಹಿಂದೇ ಮುಂದೇ ಏದೇಂದಿಗೂ ಶ್ರೀ
ಗೋವಿಂದಗೇ ಸರಿಮಿಗಿಲಿಲ್ಲೇಂತೇಂಬುದೇ ॥೧೬॥
ಮೇದಿನಿಪರಮಾಣ್ವಂಬುಕಣಂಗಳ-
ನೈದಬಹುದು ಪರಿಗಣತೇಯನು
ಮಾಧವನಾನಂದಾದಿಗುಣಂಗಳ-
ನಾದಿಕಾಲದಿಂದಗಣಿತವೇಂಬುದೇ ॥೧೭॥
ಮೂಜಗದೋಳಗಿಹ ಭೂಜಲ ಖೇಚರ
ಈ ಜೀವರೋಳು ಮಹೌಜಸನ
ಸೋಜಿಗ ಬಹುವಿಧ ನೈಜವಿಭೂತಿಯ
ಪೂಜಿಸುತನುದಿನ ರಾಜಿಸುತಿಪ್ಪುದೇ ॥೧೮॥
ಹರಿಕಥೇ ಪರಮಾದರದಲಿ ಕೇಳುತ
ಮರೇದು ತನುವ ಸುಖ ಸುರಿಯುತಲಿ
ಉರುಗಾಯನಸಂದರುಶನ ಹಾರೈ-
ಸಿರಳು ಹಗಲು ಜರಿಜರಿದು ಬಳಲುವುದೇ ॥೧೯॥
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ-
ನಸರಲಿ ನಿಂದು ನಿಯಾಮಿಸುವ
ಶ್ವಸನಾಂತರ್ಗತ ವಾಸುದೇವ ತಾ
ವಿಷಯಗಳನು ಭೋಗಿಸುವನೇಂದರಿವುದೇ ॥೨೦॥
ಗುಣಕಾಲಾಹ್ವಯ ಅಗಮಾರ್ಣವ ಕುಂ-
ಭಿಣಿಪರಮಾಣ್ವಂಬುಧಿಗಳಲಿ
ವನಗಿರಿನದಿಮೋದಲಾದದರೋಳ ಗಿಂ-
ಧನಗತಪಾವಕನಂತಿಹನೇಂಬುದೇ ॥೨೧॥
ಅನಲಂಗಾರದೋಳಿಪ್ಪೋಪಾದಿಲಿ
ಅನಿರುದ್ಧನು ಚೇತನರೋಳಗೇ
ಕ್ಷಣ ಬಿಟ್ಟಗಲದೇ ಏಕೋ ನಾರಾ-
ಯಣ ಶ್ರುತಿಪ್ರತಿಪಾದ್ಯನು ಇಹನೇಂಬುದೇ ॥೨೨॥
ಪಕ್ಷ್ಮಗಳಕ್ಷಗಳಗಲದಲಿಪ್ಪಂತ-
ಕ್ಷರಪುರುಷನಪೇಕ್ಷೇಯಲಿ
ಕುಕ್ಷಿಯೋಳಬ್ಜಜತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೇಂಬುದೇ ॥೨೩॥
ಕಾರಣಕಾರ್ಯಾಂತರ್ಗತ ಅಂಶವ-
ತಾರಾವೇಶಾಹಿತ ಸಹಜ
ಪ್ರೇರಕ ಪ್ರೇರ್ಯಾಹ್ವಯ ಸರ್ವತ್ರ
ವಿಕಾರವಿಲ್ಲದಲೇ ತೋರುವನೇಂಬುದೇ ॥೨೪॥
ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ-
ಸ್ತುತಿಸುತ ಲಕ್ಷ್ಮೀಪತಿಗುಣವ
ಕೃತಿಪತಿ ಸೃಷ್ಟಿಸ್ಥಿತಿಲಯಕಾರಣ
ಇತರ ದೇವತೇಗಳಲ್ಲಿಲ್ಲೇಂಬುದೇ ॥೨೫॥
ಪವನಮತಾನುಗರವ ನಾನೇಂತೇಂ-
ದವನಿಯೋಳಗೇ ಸತ್ಕವಿಜನರ
ಭವನಗಳಲಿ ಪ್ರತಿದಿವಸದಿ ಸುಕಥಾ-
ಶ್ರವಣ ಮಾಡುತಲಿ ಪ್ರವರನಾಗುವದೇ ॥೨೬॥
ಪನ್ನಗಾಚಲಸನ್ನಿವಾಸ ಪಾ-
ವನ್ನಚರಿತ ಸದ್ಗುಣಭರಿತ
ಜನ್ಯಜನಕಲಾವಣ್ಯಗುಣನಿಧಿ ಜ-
ಗನ್ನಾಥವಿಠಲಾನನ್ಯಪನೇಂಬುದೇ ॥೨೭॥
***
Phalavidu Baaldudake Siri Nilayana Gunagala Tilidu Bhajisuvude||
Sochita Karmagalaacharisuta Baluneecharalli Pogi Yaachisade
Khecharavaaha Charaachara Bandhaka Mochakanahudendyochisutippude||1||
Niccha Subhakutiyol*Achyuta^naghrigalarchisi Mecchisutechaaradi
Tuccha Vishayagalanicchyisade Yadruchaalabhadim Procchanaaguvude||2||
Manovaakkayadolanubhavisuva Dinadina Vishayasaadhanagalanu
Anilaantargata Vanaruhadalalochanagarpisi Daasanu Naanembuvude||3||
VaasavamukhavibudhasuranichayakeVasudevane^ Shubhaasubhada
Ee SamastajagakeeshaKeshava^ Neesha Jeevarembee Sugjnaanave||4||
Panchabedhayuta Prapancha Susatya Virinchimukharu Balivanchakage
Chanchalapratime Achanchala Prakrutiya Sanchintisi Mudalaanchitanaahude||5||
Pancharutugalali Panchaagnigalali Panchapancharoopua Tilidu
Pancha Susamskaaraanchitanaagi Dvipanchakaranadali Panchakavarivude||6||
Paatrasangada Yaatreya Charisuta Vidhaatrupitana Gunastotragala
Shotradi Savidu Vichitraanandadi Gaatrava Maredu Paratrava Padevude||7||
Hrudayadi Roopavu Vadanadi Naamavu Udaradi Nyivedyavu Shiradi Padajala
Nirmaalyavane Dharisi Kovidara Sadanaheggavana Kaayvude||8||
VaragaayatreenaamakaHari^ Geereradanghrigala Vivarava Tilidu
Taruvaayadi Shadvidharoopava Saadaradali Dhyaanisi Niruta Japisuvude||9||
Hamsamodalu Hadinenturoopagala Samstaanava Tilidanudinadi
Samsevisuva Mahaapurushara Padapaamsuva Dharisi Assamshayanaahude||10||
Bigivakantadim Drugbaashtagalim Nagemogadim Romagalogedu
Mige Santoshadi Negedaaduta Naalmoganayyana Guna Pogali Higuvude||11||
Gruhakarmava Byasaradale Paramotsaahadali Maauta Moojagada Mahitana
Seveyidenutali Modada Aharaharmanadi Samarpisutippude||12||
Kleshanandagaleeshaadheena Samaasama Bramha Sadaashivaru
Yeeshitavyaru Pareshanallade Shvaasabiduva Shakti Leshavillavembude||13||
Aa Paramaatmage Roopadvayavu Paraaparatatvagalidarolage
Stree Pumbhedadi Ee Padmaajaandava Vyaapisi Ihanendeepari Tilivude||14||
Yekottara Panchashadvarnaggalekaatmana Naamangalivu
Maa Kamalaasana Modalaadamararu Saakalyade Inanariyarembude||15||
Vondu Roopadolanantaroopagalondippuvu Gunaganasahita
*HINDE MUNDE YENDENDIGU SHREE GOVINDA^ge Sarimigilillembude||16||
Mydini Paramaanambukanangala Nydabahudu Parigananeyanu
*Maadhavanaanandaadi^ Gunangala Naadikaaladindaganitavembude||17||
Moojagadolagiha Bhoo Jala Khechara Ee Jeevarolu Mahoujasana
Sojiga Bahuvidha Nyija Vibhootiya Poojisutanu Dina Raajisutippude||18||
Harikate Paramaadaradali Keluta Maredu Tanuva Sukhasurivutali
Urugaayana Sandarushana Haaryisiruluhagalu Jarijaridu Balaluvude||19||
Vishayendrigala Tadabhimaani Sumanasarolu Nindu Niyamisuta
ShvasanaantargathaVasudeva^ Taavishayangala Bhogisutihanembude||20||
Gunakaalaahvaya Aargamaarna Kumbhini Paramaanvambudhigalali
Vanagirinadi Modalaadadarolagim Dhanagata Paavakanantihanembude||21||
AanalaamgaaradoliddhopaadiliAniruddhanu^ Chetanarolage
Kshanabittagalade Yekoonaaraayanashrutipratipaadyanu Ihanebude||22||
Pakagalakshigalasuvandi Akshara Purshanapekseyali
Kukshiyolabja Tryakshaadyamarara Eekshisi Karunadi Rakshipanebude||23||
Kaaranakaaryaantargata Amshava Taaraaveshahita Sahaja
Preraka Preeryaahvaya Sarvatra Vikaaravilladale Toruvanembude||24||
Pratidivasa Shrutismrutigalinda Samstutisuta Lakshmeepatigunava^
Krutipati Srushtisthitilayakaarana Itara Devategalallalembude||25||
Pavanamutaanugarava Taanentendavaniyolage Satkavijanara
Bhavanagalali Pratidivasadi Sukathaashravanamaaduta Pravaranaaguvude||26||
Pannagaachalasannivaasa Paavannacharita Sadhgunabharita
Janyajanaka LaavanyagunanidhiJAGANNATHA VITTALA^ananyapanembude”||27||
***
ಫಲವಿದು ಬಾಳ್ದುದಕೆ ಸಿರಿ-ನಿಲಯನ ಗುಣಗಳ ತಿಳಿದು ಭಜಿಸುವದೆ ||ಪ||
ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿಗೆ ಪೋಗಿ ಯಾಚಿಸದೆ
ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪೊದೆ ||೧||
ನಿಚ್ಚಸುಭಕುತಿಯೊಳಚ್ಯುತನಂಘ್ರಿಗಳರ್ಚಿಸಿ ಮೆಚ್ಚಿಸುತೆಚ್ಚರದಿ
ತುಚ್ಚವಿಷಯಗಳನಿಚ್ಚಿಸದಲೆ ಯದೃಚ್ಚಲಾಭದಿಂ ಪ್ರೋಚ್ಚನಾಗುವದೆ ||೨||
ಮನೋವಾಕ್ಕಾಯದೊಳನುಭವಿಸುವ ದಿನದಿನದ ವಿಷಯಸಾಧನಗಳನು
ಅನಿಲಾಂತರ್ಗತ ವನರುಹದಳಲೋಚನಗರ್ಪಿಸಿ ದಾಸನು ನಾನೆಂಬೋದೆ ||೩||
ವಾಸವಮುಖವಿಬುಧಾಸುರನಿಚಯಕೆ ವಾಸುದೇವನೆ ಶುಭಾಶುಭದ
ಈ ಸಮಸ್ತಜಗಕೀಶ ಕೇಶವಾನೀಶ ಜೀವರೆಂಬೀ ಸುಜ್ಞಾನವೆ ||೪||
ಪಂಚಭೇದಯುತ ಪ್ರಪಂಚ ಸುಸತ್ಯ ವಿರಿಂಚಿಭವಮುಖರುಬಲಿವಂಚಕಗೆ
ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದಲಾಂಛನನಾಹುದೆ ||೫||
ಪಂಚಋತುಗಳಲಿ ಪಂಚಾಗ್ನಿಗಳಲಿ ಪಂಚಪಂಚರೂಪವ ತಿಳಿದು
ಪಂಚಸುಸಂಸ್ಕಾರರಾಂಚಿತನಾಗಿ ದ್ವಿಪಂಚಕರಣದಲಿ ಪಂಚಕನರಿವುದೆ ||೬||
ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ
ಪದಜಲ ನಿರ್ಮಾಲ್ಯವನೆ ಧರಿಸಿ ಕೋವಿದರ ಸದನ ಹೆಗ್ಗದವ ಕಾಯ್ವದೆ ||೭||
ಪಾತ್ರರ ಸಂಗಡ ಯಾತ್ರೆಯ ಚರಿಸಿ ವಿಧಾತೃಪಿತನ ಗುಣಸ್ತೋತ್ರಗಳ
ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೆದು ಪಾರತ್ರಿಕ ಪಡೆವುದೆ ||೮||
ಹಂಸಮೊದಲು ಹದಿನೆಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ ಪಾಂಸುವ ಧರಿಸಿ ಅಸಂಶಯನಪ್ಪುದೆ ||೯||
ವರಗಾಯತ್ರೀನಾಮಕ ಹರಿಗೀರೆರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧರೂಪವ ಸಾದರದಲಿ ಧೇನಿಸಿ ನಿರುತ ಜಪಿಸುವದೆ ||೧೦||
ಬಿಗಿದ ಕಂಠದಿಂ ದೃಗ್ಭಾಷ್ಯಾಗಳಿಂ ನಗೆಮೊಗದಿಂ ರೋಮಗಳೊಗೆದು
ಮಿಗೆ ಸಂತೋಷದಿ ನೆಗೆದಾಡುತ ನಾಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವದೆ |}೧೧|
|
ಗೃಹಕರ್ಮವ ಬ್ಯಾಸರದಲೆ ಪರಮೋತ್ಸಾಹದಲಿ ಮೂಡುತ ಮೂಜಗದ
ಮಹಿತನ ಸೇವೆಯಿದೆನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪದೆ |}೧೨||
ಕ್ಲೇಶಾನಂದಗಳೀಶಾಧೀನ ಸಮಾಸಮ ಬ್ರಹ್ಮಸದಾಶಿವರು
ಈಶಿತವ್ಯರು ಪರೇಶನಲ್ಲದೆ ಶ್ವಾಸಬಿಡುವ ಶಕ್ತಿ ಲೇಶಿಲ್ಲೆಂಬೋದೆ ||೧೩||
ಈ ಪರಮಾತ್ಮಗೆ ರೂಪದ್ವಯವು ಪರಾಪರತತ್ತ್ವಗಳಿದರೊಳಗೆ
ಶ್ರೀಪುಂಭೇದದಿ ಈ ಪದ್ಮಾಂಡವ ವ್ಯಾಪಿಸಿ ಇಹನೆಂದೀಪರಿ ತಿಳಿವುದೆ ||೧೪||
ಏಕೋತ್ತರ ಪಂಚಾಸದ್ವರ್ಣಗಳೇಕಾತ್ಮನ ನಾಮಂಗಳವು
ಮಾ ಕಮಲಾಸನ ಮೊದಲಾದಮರರು ಸಾಕಲ್ಯದಿ ಇವನರಿಯರೆಂತೆಂಬುದೆ ||೧೫||
ಒಂದು ರೂಪದೊಳಗನಂತರೂಪಗಳು ಪೊಂದಿಪ್ಪವು ಗುಣಗಣಸಹಿತ
ಹಿಂದೆ ಮುಂದೆ ಎಂದೆಂದಿಗೂ ಶ್ರೀ ಗೋವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ ||೧೬||
ಮೇದಿನಿಪರಮಾಣ್ವಂಬುಕಣಂಗಳ ನೈದಬಹುದು ಪರಿಗಣನೆಯನು
ಮಾಧವನಾನಂದಾದಿಗುಣಂಗಳ ನಾದಿಕಾಲದಿಂದ ಗಣಿತವೆಂಬುದೆ ||೧೭||
ಮೇದಿನಿಪರಮಾಣ್ವಂಬುಕಣಂಗಳ ನೈದಬಹುದು ಪರಿಗಣನೆಯನು
ಮಾಧವನಾನಂದಾದಿಗುಣಂಗಳನಾದಿಕಾಲದಿಂದ ಗಣಿತವೆಂಬುದೆ ||೧೮||
ಮೂಜಗದೊಳಗಿಹ ಭೂಜಲ ಖೇಚರ ಈ ಜೀವರೊಳು ಮಹೌಜಸನ
ಸೋಜಿಗ ಬಹುವಿಧ ನೈಜವಿಭೂತಿಯ ಪೂಜಿಸುತನುದಿನ ರಾಜಿಸುತಿಪ್ಪುದೆ ||೧೯||
ಹರಿಕಥೆ ಪರಮಾದರದಲಿ ಕೇಳುತ ಮರೆದು ತನುವ ಸುಖ ಸುರಿಸುತಲಿ
ಉರುಗಾಯನಸಂದರುಶನ ಹಾರೈಸಿರಳು ಹಗಲು ಜರಿಜರಿದು ಬಳಲುವುದೆ ||೨೦||
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮನಸರಲಿ ನಿಂದು ನಿಯಾಮಿಸುವ
ಶ್ವಸನಾಂತರ್ಗತ ವಾಸುದೇವ ತಾ ವಿಷಯಗಳನು ಭೋಗಿಸುವನೆಂದರಿವುದೆ ||೨೧||
ಗುಣಕಾಲಾಹ್ವಯ ಅಗಮಾರ್ಣವ ಕುಂಭಿಣಿಪರಮಾಣ್ವಂಬುಧಿಗಳಲಿ
ವನಗಿರಿನದಿಮೊದಲಾದದರೊಳ ಗಿಂಧನಗತಪಾವಕನಂತಿಹನೆಂಬುದೆ ||೨೨||
ಅನಲಂಗಾರದೊಳಿಪ್ಪೋಪಾದಿಲಿ ಅನಿರುದ್ಧನು ಚೇತನರೊಳಗೆ
ಕ್ಷಣ ಬಿಟ್ಟಗಲದೆ ಏಕೋ ನಾರಾಯಣ ಶ್ರುತಿಪ್ರತಿಪಾದ್ಯಬ್ನು ಇಹನೆಂಬುದೆ |೨೩||
ಪಕ್ಷ್ಮಗಳಕ್ಷಿಗಳಗಲದಲಿಪ್ಪಂತಕ್ಷರಪುರುಷನಪೇಕ್ಷೆಯಲಿ
ಕುಕ್ಷಿಯೊಳಬ್ಜಜತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ ||೨೪||
ಕಾರಣಕಾರ್ಯಾಂತರ್ಗತ ಅಂಶವ ತಾರಾವೇಶಾಹಿತ ಸಹಜ
ಪ್ರೇರಕ ಪ್ರೇರ್ಯಾಹ್ಯಯ ಸರ್ವತ್ರ ವಿಕಾರವಿಲ್ಲದೆಲೆ ತೋರುವನೆಂಬುದೆ ||೨೫||
ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂಸ್ತುತಿಸುತ ಲಕ್ಷ್ಮೀಪತಿಗುಣವ
ಕೃತಿಪತಿ ಶ್ರುಷ್ಟಿಸ್ಥಿತಿಲಯ ಕಾರಣ ಇತರ ಸರ್ವದೇವತೆಗಳಲ್ಲಲ್ಲೆಂಬುದೆ ||೨೬||
ಪವನಮತಾನುಗವರನಾನೆಂತೆಂದವನಿಯೊಳಗೆ ಸತ್ಕವಿಜನರ
ಭವನಗಳಲಿ ಪ್ರತಿದಿವಸದಿ ಸುಕಥಾಶ್ರವಣ ಮಾಡುತಲಿ ಪ್ರವರನಾಗುವದೆ ||೨೭||
ಪನ್ನಗಾಚಲಸನ್ನಿವಾಸ ಪಾವನ್ನಚರಿತ ಸದ್ಗುಣಭರಿತ
ಆನ್ಯಜನಕಲಾವಣ್ಯಗುಣನಿಧಿ ಜಗನ್ನಾಥವಿಠಲಾನನ್ಯಪನೆಂಬುದೆ ||೨೮||
****
ಶ್ರೀ ಜಗನ್ನಾಥ ದಾಸಾರ್ಯ ವಿರಚಿತ ಫಲವಿದು ಬಾಳ್ದುದಕೆ
ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿಗೆ ಪೋಗಿ ಯಾಚಿಸದೆ
ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪೊದೆ
ll 1 ll
ಅರ್ಥ --
ಸ್ವ ಯೋಗ್ಯವಾದ ಕರ್ಮಗಳನ್ನು ಆಚರಿಸು..
ಅಧಮರಲ್ಲಿ ಹೋಗಿ ಯಾಚನೆ ಮಾಡಬೇಡ..
ಗರುಡ ವಾಹನ ಶ್ರೀಹರಿ ಚರಾಚರ ವಸ್ತುಗಳಿಗೆ ಬಂಧಕನು, ಮೋಚಕನೂ ಅವನೇ ಎಂದು ತಿಳಿ..
ಪರಮಾತ್ಮನ ಪ್ರಸಾದಕ್ಕೆ ಯೋಗ್ಯವಾದ, ವರ್ಣಾಶ್ರಮಕ್ಕೆ ಉಚಿತವಾದ, ಆಶ್ರಮೋಚಿತವಾದ, ಜ್ಞಾನ ಭಕ್ತಿ ವೈರಾಗ್ಯದಿಂದ ಕೂಡಿದ ಕರ್ಮಗಳನ್ನು ಮಾಡಬೇಕು..
ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ
ಹೇಳಿದ್ದು..
1. ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ
ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ
2. ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು
ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು
ಸಾಧಕರು ಏನು ಮಾಡಬೇಕು - ವಿಧಿ
ಏನು ಮಾಡಬಾರದು- ನಿಷೇಧ
ಇವೇ ವೇದ ಮತ್ತು ವ್ಯಾಸ ಸಾಹಿತ್ಯದ ತತ್ವಗಳು..
ಇವೇ ದಾಸ ಸಾಹಿತ್ಯದ ತಿರುಳು..
ಶ್ರೀಮದಾಚಾರ್ಯರು ತಮ್ಮ ಸದಾಚಾರ ಸ್ಮೃತಿಯಲ್ಲಿ
ಕೇವಲ ಕರ್ಮಾನುಷ್ಠಾನ ಮುಖ್ಯವಲ್ಲ.. ಶಾಸ್ತ್ರಾಧ್ಯಯನದಿಂದ ಜ್ಞಾನ ಪಡೆ..ಬಿಂಬ ರೂಪಿಯಲ್ಲಿ ಮನಸ್ಸು ಸ್ಥಿರಗೊಳಿಸು..ಮಾಡಿ ಮಾಡಿಸುವ ಹರಿ ಎಂಬ ಅನುಸಂಧಾನವಿರಲಿ.. ಎನ್ನುತ್ತಾರೆ..
ಲೌಕಿಕ ವಿಷಯದಲ್ಲಿ --
ನೀಚರು ನಿತ್ಯ ಸಂಸಾರಿಗಳು.. ಬಲು ನೀಚರು ತಮೋಯೋಗ್ಯರು.. ಅವರಲ್ಲಿ ಹೋಗಿ ಯೋಚಿಸಬೇಡ. ಈ ಯಾಚನೆ ಜ್ಞಾನ, ಉಪದೇಶ, ಸಂಪತ್ತು ಯಾವುದೇ ಆಗಿರಬಹುದು..
ಯಾವುದನ್ನೂ ಬೇಡ ಬೇಡ.. ಅವರುಗಳ ಸಹವಾಸವೂ ಬೇಡ..
ತಮಗಿಂತ ನೀಚರಾದವರಲ್ಲಿ ಜ್ಞಾನ ಜಿಜ್ಞಾಸೆಯ
ಮಾಡಿದರೆ ಶ್ರೀ ಹರಿಯ ಜ್ಞಾನದ ವೃದ್ಧಿ ಆಗುವದಿಲ್ಲ..
ದುಃಖ ಪ್ರಾಪ್ತಿ ಆಗುವುದು..
ಅದಕ್ಕೆ ದಾಸರು ಹಾಡುತ್ತಾರೆ..
ಹಾಡಿದರೆನ್ನ ಒಡೆಯನ ಹಾಡುವೆ..
ಬೇಡಿದರೆನ್ನ ಒಡೆಯನ ಬೇಡುವೆ..
ಒಡೆಯಗೆ ಒಡಲ ತೋರುವೆ..ಎನ್ನ |
ಬಡತನ ಬಿನ್ನಹ ಮಾಡುವೆ| ಒಡೆಯ ಶ್ರೀ ಪುರಂದರವಿಠಲರಾಯನ | ಅಡಿಗಳನು ಬದುಕುವೆ, ಸೇರಿ ಬದುಕುವೆ
ಬೇಡುವೆನು ನಾ ಒಂದ ಬೇಡತಕ್ಕುದ ದೇವಾ
ಬೇಡದಂತೇ ಪರರ ಮಾಡಯ್ಯ ಹರಿಯೆ
ಗೋಪಾಲದಾಸರ ನುಡಿ..
ದೇವತೆಗಳ ವಿಷಯ ತೆಗೆದುಕೊಂಡರೆ --
ಶ್ರೀಹರಿಯನಲ್ಲದೇ ಅನ್ಯ ದೇವತೆಗಳನ್ನು ಆಶ್ರಯಿಸುವವ, ದುಷ್ಟ ಪಂಡಿತನೇ ಸರಿ..
ಇದು ಭಾಗವತದಲ್ಲಿ ಅಕ್ರೂರ ಹೇಳುವ ಮಾತು..
"ಕಃ ಪಂಡಿತಸ್ತದ ಪರಂ ಸಮೀಯಾತ್ "
'ಬಲು' ಶಬ್ದ 'ಯಾಚಿಸಿಬೇಡ' ಎನ್ನುವದಕ್ಕೂ ಜೋಡಿಸಿ ಕೊಳ್ಳಬಹುದು.. ಉತ್ತಮರನ್ನು
( ಗುರುಗಳು ಜ್ಞಾನಿಗಳು ಹಿರಿಯರು ) ಯಾಚಿಸಿದರೂ
ಜೀವನೋಪಾಯಕ್ಕೆ ಎಷ್ಟು ಬೇಕೋ ಅಷ್ಟೇ ಯಾಚಿಸು.. ದಾಸರು ಮಧುಕರ ವೃತ್ತಿ ಮಾಡುವಾಗ ಹೀಗೇ .. ನಿತ್ಯ ಪೋಷಣೆಗೆ ಬೇಕಾದಷ್ಟೇ..ಬೇಡುವರು..
ಹಾಲು ಕೊಟ್ಟಷ್ಟೇ ಕರೆಯಬೇಕೇ ಹೊರತು ಕೆಚ್ಚಲು ಕಿತ್ತುವಷ್ಟಲ್ಲ..
ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳು ದೇವರಿಗೆ ತೋರುವವೇ? ಅದು ಗೊತ್ತಾಗುವದು ಹೇಗೆ? ರಸೀದಿ ಸಿಗುವುದೇ ?
ಖಂಡಿತ ಎನ್ನುತ್ತಾರೆ...ಜ್ಞಾನಿಗಳು..
ಉದಾಹರಣೆಗೆ - ಉತ್ತಮರ ಸಂಗ , ಹೆಚ್ಚಿನ ಜ್ಞಾನ ಭಕ್ತಿ ವೈರಾಗ್ಯ ಕೊಡುತ್ತಾನೆ..ಪಾಠ ಕೇಳಲು , ಮಾಡಲು ಹೆಚ್ಚಿನ ಸಮಯ ಒದಗಿಸುತ್ತಾನೆ..ಇವು ಒಳ್ಳೆಯ ಕರ್ಮಗಳ ರಸೀದಿ..
ದುರ್ಜನರ ಸಂಗ, ಧಾರ್ಮಿಕ ವಿಷಯಗಳಲ್ಲಿ ಅನಾಸಕ್ತಿ.... ಕೆಟ್ಟ ಕರ್ಮಗಳ ರಸೀದಿ..
ಮತ್ತೊಂದು ಸಂದೇಹ..
ನಾವು ಕರೆದರೆ ಅವನಿಗೇ ಕೇಳೀತೆ ? ಬಂದಾನೆಯೆ?
ದಾಸರು ಅದಕ್ಕೇ ಇಲ್ಲಿ ಪರಮಾತ್ಮನನ್ನು ಕರೆದದ್ದು..
ಖೇಚರವಾಹನೆಂದು... ಆಕಾಶದಲ್ಲಿ ಅತ್ಯಂತ ಶೀರ್ಘ ಗತಿಯಿಂದ ಚಲಿಸುವ ಗರುಡ ಹರಿಯ ವಾಹನ..
ಖ- ಆಕಾಶ ಆತ ಹೃದಯಾಕಾಶದಲ್ಲಿಯೇ ಇರುವವ..
ಕರಿ ಮೊರೆ ಇಡಲು ಗರುಡನನ್ನೂ ಬಿಟ್ಟು ಬರಲಿಲ್ಲವೇ..!!
ಸಹಸ್ರಾಕ್ಷ.. ಸಮೀಪದಲ್ಲಿಯೇ ಇದ್ದು ಎಲ್ಲವನ್ನು ನೋಡುವವರ..ದೇಹಾಂತರ್ಗತ ಸಂರಕ್ಷಣೆಯ ಭಾರ ಹೊತ್ತ ಅನಿರುದ್ಧ ರೂಪಿ ಪರಮಾತ್ಮ
ಭಾಗವತ ಭಗವಂತನನ್ನು ಕರೆಯುವದು... "ಅವಿಜ್ಞಾತ ಸಖ"
ಎಂದು ..ಸದಾ ಹಿತವನ್ನು ಬಯಸುತ್ತಾ ಭಕ್ತನ ಜೊತೆಯಲ್ಲಿಯೇ ಇರುವವ..
ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ
ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ l
( ವ್ಯಾಸರಾಯರು )
ಪ್ರೀಣಯಾಮೋ ವಾಸುದೇವಂ
ಪಶ್ಯತಾಂ ದುಃಖಸಂತಾನನಿರ್ಮೂಲನಂ ದೃಶ್ಯತಾಂ ದೃಶ್ಯತಾಮಿತ್ಯ ಜೇಶಾಚಿ(ರ್ಥಿ)ತಮ್ |
ನಶ್ಯತಾಂ ದೂರಗಂ ಸರ್ವದಾಪ್ಯಾತ್ಮಗಂ ಪಶ್ಯತಾಂ ಸ್ವೇಚ್ಚಯಾ ಸಜ್ಜನೇಷ್ವಾಗತಂ | (ದ್ವಾದಶ ಸ್ತೋತ್ರ)
ಸಕಲ ಚೇತನಾಚೇತನರಿಗೆ ಭವ ಸಂಸಾರದಲ್ಲಿ ಬಂಧಕ ಮಾಡುವನು ಶ್ರೀಹರಿಯೇ..
ಈ ಬಂಧನದಿಂದ ಮೋಚನ ಮಾಡುವವನು ಶ್ರೀಹರಿಯೇ..
"ಬಂಧಕೋ ಭವಪಾಶೇನ ಭವಪಾಶಾಶ್ಚ ಮೋಚಕಃ"
ಅನಾದಿ ಕಾಲದಿಂದ ಬಂಧಕ ರೂಪದಿಂದ ಇರುವ ಲಿಂಗ ದೇಹವನ್ನು ಅವರ ಸಾಧನೆ ಪೂರ್ಣಗೊಂಡ ನಂತರ ಭಂಗ ಮಾಡಿ ನಿಜಗತಿಯನ್ನು ಕೊಡುವಂಥವನು..
ಇಲ್ಲಿ ಮಾನ್ವಿ ಪ್ರಭುಗಳು ತಿಳಿಸಿದ್ದು..
ವಿಹಿತ ಕರ್ಮಾಚರಣೆ ಮಾಡು..
ನಿಷ್ಕಾಮ ಕರ್ಮ ಮಾಡು..
ಹೀಗೆ ಸರ್ವದಾ ಶ್ರೀಹರಿಯ ಅಸದೃಷವಾದ ಗುಣಗಳನ್ನು ಸ್ಮರಣೆ ಪೂರ್ವಕ ಚಿಂತನೆ ಮಾಡುತ್ತಿರುವುದು..
ಇದೇ ಫಲವಿದು ಬಾಳ್ದುದಕೆ..
(received in WhatsApp)
***
just scroll down for other devaranama