Showing posts with label ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ ಗುರುತ vijaya vittala. Show all posts
Showing posts with label ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ ಗುರುತ vijaya vittala. Show all posts

Thursday, 17 October 2019

ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ ಗುರುತ ankita vijaya vittala

ವಿಜಯದಾಸ
ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ |
ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಪ

ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ |
ಹೊನ್ನು ಕಂಭದಲಿ ನಿಂದು ತೋರಿ |
ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ |
ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು 1

ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ |
ದೃಷ್ಟಿಯಿಂದ ನೋಡಲು ಭ್ರಾಂತಳಾಗಿ |
ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು |
ದುಷ್ಟ ನಾದಿನಿ ಕಂಡು ಮಾವಗೆ ಪೇಳಿದಳು 2

ಇಂದಿರೇಶ ತಾನಾಗಿ ಎದೆ ಮುಟ್ಟಿ ನಿನಗೆ |
ಇಂದಿನ ದಿವಸ ನಾ ಭ್ರಮಿಸಿದ್ದು |
ಒಂದೊಂದು ಬಗೆ ನೆನಿಸಿ ಕಲೆಕಲೆಗಳು ಕೆರಿದ್ಯಾಸೆ |
ಮುಂದೆಗಾಣದೆ ನಡಿಯೆ ಗಂಡಾ ತಲೆದೂಗಿದನು3

ಬೀದಿಯೊಳಗೆ ನೀನು ಕುದರಿಯ ಕುಣಿಸುತ
ಹಾದು ಪೋಗಲು ನಮ್ಮ ಮನಿಯ ಮುಂದೆ |
ಪಾದಕ್ಕೆ ಕಪ್ಪನೆ ಇಟ್ಟು ತೊಟ್ಟ ಕುಪ್ಪಸ ಬಿಚ್ಚೆ |
ಮದನ ನೋಡಿ ಮನೆಯಲ್ಲರಿಗೆ ಬೀರಿದನು4

ಪರಮಪುರುಷ ನೀನೆ ನಿನ್ನಂಗ ಸಂಗಕ್ಕೆ |
ಸರಿಗಾಣೆ ಸ್ಮರಿಸೆ ಮನಸು ನಿಲ್ಲದೊ |
ಸುರತ ಕೇಳಿಯ ಜಾಣ ವಿಜಯವಿಠ್ಠಲ ಎನ್ನ |
ಕರೆದು ಮಸಕು ತೆಗೆದು ತರ್ಕೈಸೊ ಚನ್ನಿಗಾ 5
*********