Showing posts with label ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ gopalakrishna vittala. Show all posts
Showing posts with label ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ gopalakrishna vittala. Show all posts

Friday, 27 December 2019

ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ankita gopalakrishna vittala

ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ||pa||

ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ||a.pa||

ಸುರರು ಅಸುರರು ಕೂಡಿ ಶರಧಿಯ
ಭರದಿ ಮಥನವ ಮಾಡಿ
ಗರಳವು ಉದ್ಭವಿಸಲು ಕಂಗೆಡುತಲಿ
ಹರನನು ಸ್ತುತಿಮಾಡಿ ||1||

ಮೃತ್ಯುಂಜಯ ಪಾಹಿ | ಸಲಹೊ
ಕೃತ್ತಿ ವಾಸನೆ ಪಾಹಿ
ಮೃತ್ಯುವಾದ ವಿಷ ಭಯವನೆ ಬಿಡಿಸೈ
ಸತ್ಯವಿಕ್ರಮ ಪಾಹಿ ||2||

ಪರಿಪರಿ ಸ್ತುತಿಗೈಯೆ | ಹರಮನ
ಕರಗುತ ಕೃಪೆ ಗೈಯೆ
ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು
ಪರಮ ಮಂಗಳ ಕಾಯೆ ||3||

ತನುಸುಖವ ತೊರೆದು | ಲೋಕವ
ಸನುಮತದಲಿ ಕಾಯ್ದು
ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ
ಎನುತ ಗಿರಿಜೆಗೆ ಪೇಳ್ದು ||4||

ಕರದಿ ಸೆಳೆದು ಕುಡಿದ | ವಿಷವನು
ಭರದಲಿ ವಿಧಿ ಕಂದ
ಉರಕಿಳಿಯದೆ ನಿಂತಿತು ತಾ ಕಂಠದಿ ಶ್ರೀ
ಹರಿಯ ಕೃಪೆಯಿಂದ ||5||

ಜಗವ ದಹಿಪ ಕಾಳಕೂಟವ
ನಗಜೇಶನು ಕೇಳ
ಬಿಗಿದು ಕಂಠದಿ ನಿಲ್ಲಿಸಿ ಲೋಕವ
ಪೊರೆದನು ಉರಿಫಾಲ ||6||

ಪೋಯ್ತು ಕಾಳರಾತ್ರಿ | ಮಂಗಳ
ಆಯಿತು ಶಿವರಾತ್ರಿ
ಶ್ರೀಯರಸ ಗೋಪಾಲಕೃಷ್ಣ
ವಿಠ್ಠಲನ ಪ್ರೀತಿ ಪಾತ್ರ ||7||
*******