ankita ಶ್ರೀಕರವಿಠಲ
ರಾಜಬಾರೊ ಗುರುರಾಜ ಬಾರೊ
ರಾಜಾಧಿರಾಜ ಗುರು ಪ
ಸಹ್ಲಾದನಣ್ಣ ಬಾರೊ ಪ್ರಹ್ಲಾದರಾಜ
ಬಾಹ್ಲೀಕ ವ್ಯಾಸನಾಗಿ ಉಲ್ಹಾಸದಿಂದ ಬಾರೊ 1
ತುಂಗನಿವಾಸ ಮುನಿಪುಂಗವ ನೀ ಭಕ್ತ
ಜಂಗುಳಿ ಪಾಲಿಸಲು ಸಂಗೀತಪ್ರಿಯ ಬಾರೊ 2
ಚೂತರಸದಿ ಬಿದ್ದ ಪೋತನ ಸಲಹಿದ
ವಾತಸುಮತಾಭ್ಧಿಸಿತಾಕಿರಣ ಬಾರೊ 3
ವಂಧ್ಯಾಂಧರಿಗೆ ಸುಕಂದರಾಕ್ಷಿಗಳ
ಕುಂದದೆ ಕೊಡುತಿಪ್ಪ ಸುಂದರವದನನೆ ಬಾರೊ 4
ನೀ ಕರುಣಾಸಿಂಧು ಬೇಕಾದ್ದು ಕೊಡುತಿರೆ
ಬೇಕೆಂದು ಬೇಡೆ ಪರರ ಶ್ರೀಕರವಿಠಲನಾಣೆ 5
***
ರಾಗ: ಮಿಶ್ರಕಾಪಿ ತಾಳ: ಕವ್ವಾಲಿ/ಏಕ (raga tala may differ in audio)