ಕಾಖಂಡಕಿ ಶ್ರೀ ಮಹಿಪತಿರಾಯರು
ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1
ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2
ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3
***