ಪುರಂದರದಾಸರು
ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |ಎಲ್ಲಿಯ ಸೋದರಮಾವನೆ ಪ
ಎಲ್ಲಿಯ ಮಲ್ಲರಸಂಗ |ಖುಲ್ಲಕಂಸನು ನಮಗೆ |ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪ
ವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |ಒಂದೊಂದು ಫಲದಿಂದಲಿ ಸಂದಣಿತವೆ ||ಕುಂದಕುಸುಮದಲಿರುವ ಮಂದಿರದಲಿಚಕೋರ|ಒಂದೊಂದು ಸುಖಭರಿತವೆ ||ಅಂದುಮಾಧವನಮ್ಮ ಹೊಂದಿ ಕರವಿಡಿದ |ನಂದನ ಕಂದನ ಚರಿತವೆ ಸಖಿಯೆ 1
ಅಕ್ರೂರ ತಾನೆಲ್ಲ ಅಚ್ಯುತಗೆಎಡೆಮಾಡಿ |ಆ ಕ್ರೂರನೆನಿಸಿದನೆ |ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |ಚಕ್ರಧರನಗಲಿಸಿದನೆ ||ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|ಜಾಕ್ಷಿಗೆ ತಂದಿತ್ತನೆ-ಸಖಿಯೆ 2
ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |ನಾರಿಯರಿಗೆ ಚಲ್ಲಿದನೆ ||ಮೋರೆ ಮೋರೆ ನೋಡಿ ಅಧರಾಮೃತಗಳ |ಸಾರಿ ಸಾರಿ ಸವಿದುಂಬನೆ ||ದ್ವಾರಕಾಪುರವಾಸ ಪುರಂದರವಿಠಲ |ಸೇರಿ ನಮ್ಮನು ಸಲಹುವನೆ-ಸಖಿಯೆ 3
***

pallavi
elliya mathurApurapu elliya tA billuhabba elliya sOdaramAvane
anupallavi
elliya mallara sanga gulla kamsanu namage elliya janmada vairiye sakhiye
caraNam 1
vrndAvanadoLagiruva vrkSa jAtigaLella ondondu phaladindali sandaNitave
kunda kusumadaliruva mandiradali cakOra ondondu sukha bharitave
andu mAdhava namma hondi karaviDida nandana kandana caritave sakhiye
caraNam 2
akrUra tAnella acyutage eDemADi A krUranenisidane
vakra mArgava kUDi vaniteyara usireNisi cakradharanagalisidane
akramisi suralOka pArijAtavanambujAkSige tandittane sakhiye
caraNam 3
nIra cellATadoLu nilisi nammellara nAriyarige cellidane
mOre mOre nODi adharAmrtagaLa sAri sAri savidumbane
dvArakApuravAsa purandara viTTala sEri nammanu salahuvane sakhiye
***