ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ
ಪದುಮನಾಭನÀ ಸತಿ ಉದ್ಧರಿಸೆನ್ನನೆಂದು
ಉದಕವೆರೆದು ನಮಸ್ಕರಿಸಿ ವಂದಿಸುತಲಿ
ಸುಧೆಯ ಸುರರಿಗಿತ್ತ ಧನ್ವಂತರಿ ನಯನದಿ
ಉದಿಸಿದೆ ಆನಂದ ಅಶ್ರುಗಳಿಂದಲಿ
ಮದಗರ್ವ ಬಿಡಿಸೆನ್ನ ಶುದ್ಧಿಯನ್ನೆ ಮಾಡಿ
ಹೃದಯದಿ ಹರಿಯ ತೋರಿ ರಕ್ಷಿಸೆಂದೆನಲು
ಸದ್ದಿಲ್ಲದೆ ಪೊರೆವ ಗೋಪಾಲಕೃಷ್ಣವಿಠ್ಠಲ
****