kruti by Nidaguruki Jeevubai
ಶ್ರೀಶ ಕೇಶವ ಮಾಧವ
ವಾಸುದೇವನ ದೇವ ವಾಸವ ವಂದಿತ ಪ
ಸಾಸಿರನಾಮನೆ ಭೂಸುರಪಾಲನೆ
ದೋಷವಿದೂರನೆ ಶೇಷಶಯನಹರಿ 1
ಇಂದಿರಾರಮಣನೆ ನಂದಗೋಪಿಯ ಕಂದ
ಮಂದರಧರ ಗೋವಿಂದ ಗೋ ಗೋಪಪಾಲ2
ಭುವನ ಮೋಹನರೂಪ ನವನವ ಚರಿತನೆ
ನವನೀತಧರ ಕೃಷ್ಣ ಭುವನ ವಿಲಕ್ಷಣನೆ 3
ರಂಗನಾಯಕನೆ ಪ್ಲವಂಗ ವತ್ಸರದೊಳು
ಭಂಗಗಳಳಿಯುವ ಶೃಂಗಾರ ಮೂರುತಿ4
ಶ್ರಮ ಪರಿಹರಿಸುತ ಮಮತೆಯಿಂದಲಿ
ಶ್ರೀ ಕಮಲನಾಭ ವಿಠ್ಠಲ 5
***