ರಾಗ: ದ್ವಿಜಾವಂತಿ ತಾಳ: ರೂಪಕ
ಗುರುವಿಗೇ ಎರಗುವೇ ಪ
ಪರಿಮಳ ಸುಧೆಗಿತ್ತು ಪರಿಸರಮತ ಕಾಯ್ದ ಅ ಪ
ಹರಿಯುರು ಭಕುತಗೆ ನರಹರಿ ಪ್ರಿಯನಿಗೇ
ಕರುಣಿಗಳರಸಗೇ ಶರಣನ ಪೊರೆಯೆಂದು 1
ತುಂಗೆಯ ತೀರವ ಸಿಂಗರಿಸಿರುವಗೇ
ರಂಗನದಾಸರ ಸಂಗದಲ್ಲಿಡಿರೆಂದು 2
ಕುಂತಿಜ ಪ್ರಿಯಾನಂತವಿಠಲ ಕಿಂಕರನಿಗೇ
ಸಂತತ ಹರಿಪದ ಚಿಂತನೆ ಕೊಡಿರೆಂದು 3
***