Showing posts with label ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ purandara vittala YAAKE KADEGANNINDA NODUVE KRISHNA NEE. Show all posts
Showing posts with label ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ purandara vittala YAAKE KADEGANNINDA NODUVE KRISHNA NEE. Show all posts

Monday, 6 December 2021

ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ purandara vittala YAAKE KADEGANNINDA NODUVE KRISHNA NEE



ರಾಗ ರೇಗುಪ್ತಿ ಅಟತಾಳ

ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ
ನೀ ಕರುಣಾಕರನಲ್ಲವೆ ||ಪ||

ಭಕ್ತವತ್ಸಲ ನೀನಲ್ಲವೆ, ಕೃಷ್ಣ
ಚಿತ್ಸುಖದಾತ ನೀನಲ್ಲವೆ
ಅತ್ಯಂತ ಅಪರಾಧಿ ನಾನಾದಡೇನಯ್ಯ
ಇತ್ತಿತ್ತ ಬಾರೆನ್ನಬಾರದೆ ರಂಗ ||

ಇಂದಿರೆಯರಸ ನೀನಲ್ಲವೆ, ಬಹು
ಸೌಂದರ್ಯ ನಿಧಿ ನೀನಲ್ಲವೆ
ಮಂದಮತಿ ನಾನಾದರೇನು ಕೃಪಾ-
ಸಿಂಧು ನೀ ರಕ್ಷಿಸಬಾರದೆ ರಂಗ ||

ದೋಷಿಯು ನಾನಾದಡೇನಯ್ಯ, ಸರ್ವ-
ದೋಷರಹಿತ ನೀನಲ್ಲವೆ
ಘಾಸಿ ಯಾತಕೆ ನಿನ್ನ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀಪುರಂದರವಿಠಲ ||
***

pallavi

yAke kaDekaNNinda nODuve krSNa nI karuNAkaranallave

caraNam 1

bhaktavatsala nInallave krSNa citsukhadAta nInallave
atyanta aparAdhi nAnAdaDEnayya ittitta bArenna bArade ranga

caraNam 2

indireyarasa nInallave bahu saundarya nidhi nInallave
mandamati nAnAdarEnu krpAsindhu nI rakSasa bArade ranga

caraNam 3

dOSiyu nAnAdELEnayya sarva dOSa rahita nInallave
gAsi yAtake ninna nambide salahayya shESashAyi shrI purandara viTTala
***

ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ ಕರುಣಾಕರನಲ್ಲವೆ? ಪ

ಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?
ಅತ್ಯಂತ ಅಪರಾಧಿ ನಾನಾದಡೇನಯ್ಯಇತ್ತಿತ್ತ ಬಾ ಎನ್ನಬಾರದೆ ರಂಗ 1

ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?
ಮಂದಮತಿ ನಾನಾದಡೇನು ಕೃಪಾಸಿಂಧುನೀ ರಕ್ಷಿಸಬಾರದೆ ರಂಗ2

ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯಶೇಷಶಾಯಿ ಶ್ರೀಪುರಂದರವಿಠಲ3
*******