..
kruti by ಬೇಲೂರು ವೈಕುಂಠ ದಾಸರು belur vaikunta dasaru
ದೇವಾನಾ ಮೂರು ಲೋಕಂಗಳನುನೆರೆ
ಕಾವಾನಾ ಶರಣಾಗತ ಸಂ
ಜೀವಾನ ರೂಪ ಕಂಡೆ ಕೈಯಡಿಯಾ ಪ
ಧಗಧಗಿಸುವ ಕೋಟಿ ದಿವಾಕರ ಕಿರಣಗಳ
ನುಗುಳುವ ಮಣಿಮಕುಟದಾ ಸಿರದಾ
ಧೃಗುಳುಗಳ ಕಾಂತಿಯ ಮೊಗೆದು ಚೆಲ್ಲುತ ಪಾ
ಲೊಗುವ ಕದಪಿಲಿ ಢಾಳಿಪ ಕುಂಡಲಂಗಳಾ 1
ತಿಲಕದ ಕುಡಿವರಿದಿಹ ಪುರ್ಬುಗಳ ಮಂ
ಜುಳ ಹೇಮ ಚಂಪಕದ ನಾಸಿಕದಾ
ಜಲಜ ಕಸ್ತೂರಿ ಕಪ್ಪುರದ ಕಂಪಿನ
ಸುಲಿಪಲ್ಲಿನ ಬಾಯಿದೆರೆಯ ಚೆಲುವನುಳ್ಳಾ 2
ತೋರಮಂದಾರ ತುಲಸೀ ವನಮಾಲೆ ಕೊರಳ
ಹಾರ ಪೇರುರದಾ ಶ್ರೀ ಚಂದನದಾ
ವಾರಿಜಪಾಣಿಯುಗದೆ ಶಂಖಚಕ್ರ ಸ-
ರೋರುಹ ಕರದಲಭಯವಿತ್ತು ಸಲಹುವಾ 3
ಅಂದು ಜಘನದಿ ಕರವಿಟ್ಟು ಪೊಂಬಟ್ಟೆಯನುಟ್ಟು
ಪಾದದಿ ಮಣಿ ಬಿರುಡೆಯವಿಟ್ಟು ಸ
ನ್ಮುದದಿ ವೀರಮುದ್ರಿಕೆ ಮಂಡಿಕಾಗಳನಿವಿಟ್ಟು
ಮೃದುಪಾದನಖದಿ ಮೂಜಗವ ಬೆಳಗುತಿಹ4
ಸರೋರುಹ ಪಲ್ಲನ ಅರುಣಕಿರಣದಿ ಪಾವಕ
ವರಕಾಂತಿಯ ಗೆಲುವಾ ಜಾಜಿ ಸೇವಂತಿಗೆ
ಮೃದುವನು ಸೋಲಿಪಡಿಗಳಾ ಶ್ರೀ ವೆಲಾ
ಪುರದ ವೈಕುಂಠೇಶ ವೇಂಕಟಾದ್ರೀಶಾ 5
***