Showing posts with label ಭಾರತಾದೇವಿಯರ ಪಾದ ಚಾರು ಚರಣಕೆರಗುವೆ kamalanabha vittala. Show all posts
Showing posts with label ಭಾರತಾದೇವಿಯರ ಪಾದ ಚಾರು ಚರಣಕೆರಗುವೆ kamalanabha vittala. Show all posts

Thursday, 5 August 2021

ಭಾರತಾದೇವಿಯರ ಪಾದ ಚಾರು ಚರಣಕೆರಗುವೆ ankita kamalanabha vittala

 ..

kruti by Nidaguruki Jeevubai


ಭಾರತಾದೇವಿಯರ ಪಾದ

ಚಾರು ಚರಣಕೆರಗುವೆ ಪ


ವಾರಿಜಾಕ್ಷಿ ನಿನ್ನ ಮಹಿಮೆ

ಬಾರಿ ಬಾರಿ ಪೊಗಳುವೆ ಅ.ಪ


ಸುಂದರಾಂಗಿ ಶುಭಕರಾಂಗಿ

ಬಂದು ಎನ್ನ ಪಾಲಿಸು

ಇಂದಿರೇಶನನ್ನು ಸದಾ ಆ-

ನಂದದಿಂದ ಭಜಿಸಲು 1

ಬಾರಿ ಬಾರಿ ನಿನ್ನ ಸ್ತುತಿಪೆ

ಮಾರುತನರ್ಧಾಂಗಿಯೆ

ಸಾರಿ ಸಾರಿ ಶ್ರೀರಮಣನ

ಸಾರ ಕೃಪೆಯ ಕರುಣಿಸು2

ಕರುಣಿಸಮ್ಮ ನಿನ್ನ ಪತಿಯ

ಸ್ಮರಣೆ ನಿರುತ ಮರೆಯದೆ

ಕರುಣಾಕರನೆ ಕಮಲನಾಭ

ವಿಠಲನಂಘ್ರಿ ಧ್ಯಾನವೀಯೆ 3

***