ಘನ ಗುರು ನೀನೆನೋ ಎನಗೆ ಸಾಕ್ಷಾತವೋ ಮನಕಾದನಕೂಲವೋ ಪ
ಕಣ್ಣಿಲೆ ಕಂಡೆವೋ ಚನ್ನಾಗ್ಹಿಡಿದೆವೋ ಇನ್ನೆಲ್ಲಿಗ್ಹೋದೆಲವೋ ಮುನ್ನಿನ ಪುಣ್ಯವೋ ನಿನ್ನ ನೋಡಿದೆವೋ ಧನ್ಯ ಧನ್ಯವಾದೆವೋ 1
ಸಾಧಿಸಿ ಬಿಡೆವೋ ಭೇದನ ಮಾಡೆವೋ ಸದಮಲ ಸುಖಗೂಡುವೆವೋ ಸಾಧನ ಮಾಡುವೆವೋ ಭೇದಿಸಿ ನೋಡುವೆವೋ ಸದೋದಿತ ಬೆರದಾಡುವೆವೋ 2
ಗುಹ್ಯ ಗುರುತವೋ ಧ್ಯಾನಿಸುವೆವೋ ದಂiÀiಮಾಡಬೇಕೆಲವೋ ಇಹಪರ ನೀನೆವೋಮಹಿಪತಿ ನಿಜವೋ ತಾಯಿತಂದೆ ನೀನೆವೋ 3
****