Showing posts with label ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು krishnavittala. Show all posts
Showing posts with label ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು krishnavittala. Show all posts

Monday, 2 August 2021

ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ankita krishnavittala

ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ


ಸೋಜೀಗ ವಲ್ಲವೆ ರಾಜಾ ಗುರುವು ನೀನು

ನೈಜ ರೂಪದಿ ಬಂದು ಮಾಜಾದೆ ಪೊರೆವುದು ಅ.ಪ


ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ

ಬೆಂಬಲ ನೀನಮಗೆ ಇಂಬು ಪಾಲಿಸು ಗುರುವೇ

ನಂಬೀದ ಜನಗಣ ಡಿಂಭದಿ ನೀ ಮೂಡಿ

ಹಂಬಲ ವಳಿಪುದು ಅಂಬಕ ದೊಳು ಕಂಡೇ 1


ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ

ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ

ಇಲ್ಲದಿರಲು ನೀನು ಕಳ್ಳ ಕಲಿಯು ಜಗ

ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ 2


ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ

ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು

ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ

ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ 3


ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ e್ಞÁನ

ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ

ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ

ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ 4


ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು

ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ

ಇಂದ್ರ ತಾತನ ಹೃದಯ ಮಂದೀರದಲಿ ನಲಿವ

ಇಂದಿರೇಶ ಕೃಷ್ಣವಿಠಲ ರಾಯನ ತೋರು 5

****