Showing posts with label ಶನ್ಯಂತರ್ಗತ ಶ್ರೀನಿವಾಸ ನಿನ್ನ ಶರಣು neleyadikeshava. Show all posts
Showing posts with label ಶನ್ಯಂತರ್ಗತ ಶ್ರೀನಿವಾಸ ನಿನ್ನ ಶರಣು neleyadikeshava. Show all posts

Tuesday, 1 June 2021

ಶನ್ಯಂತರ್ಗತ ಶ್ರೀನಿವಾಸ ನಿನ್ನ ಶರಣು ankita neleyadikeshava

 " ಶ್ರೀ ಶನೈಶ್ಚರ ಸ್ತುತಿ " 

" ರಚನೆ "

ಶ್ರೀ ಕವಿಸಾರ್ವಭೌಮ ಕನಕದಾಸರು 

ರಾಗ : ಹಂಸಾನಂದೀ    ತಾಳ : ಆದಿ 


ಶನ್ಯಂತರ್ಗತ ಶ್ರೀನಿವಾಸ ।

ನಿನ್ನ ಶರಣು ಹೊಕ್ಕೆನೊ -

ಕಾಯೋ ಶ್ರೀಶಾ ।। ಪಲ್ಲವಿ ।।


ಯನ್ನ ಜನ್ಮಾಂತರದ ಪಾಪವ ।

ಚನ್ನವಾಗಿಯೆ ತೊಡದು ತವ ಪಾದ ।

ಘನ್ನ ಜ್ಞಾನ ಚಿರಾಯು ಸಂಪದ ।

ಪುಣ್ಯ ಆರೋಗ್ಯಾದಿ ಸಿರಿಯಿತ್ತು ।। ಅ ಪ ।। 

 

ನೀಲಾಂಜನ ಸಮವರ್ಣ ।

ಶೀಲ ರವಿಯ ಪುತ್ರನು ತಾರನಣ್ಣ ।

ಬಾಲೆ ಛಾಯೆಗೆ ಮಾರ್ತಾಂಡನಲಿ ।

ನೀಲನಾಗಿ ಪುಟ್ಟಿದ ಕೃತ ।।

ಜಾಲಕಾಲ ತ್ರಿಂಶತಿಕೊಮ್ಮೆ ದ್ವಾದಶ ।

ಮೂಲರಾಶಿಗೆ ಲೀಲೆಯಿಂಬಹ ।

ಲೋಲಲಾಣ್ಯ ವೃಷಾದ್ರಿಗೊಡೆಯನೆ -

ಮೇಣ್ ಮೇಣ್ ಸುಖವೇಯೋ ದಣಿಸದೆ ।। 1 ।।


ದ್ವಾದಶಾಷ್ಟಮ ಜನ್ಮ ಸ್ಥಳದಿ । ವೇದ ।

ವೇದ್ಯನೆ ಕಡೇ ದ್ವಿತಿಯದಲಿ ।

ಹೋದ ಕಾಲದಿ ಪಾಪಿ ನರಗೆ ವ್ಯಾಧಿ ।

ಹಾದಿ ನಡಗೆ ಧನ ನಾಶ । ಕಾದ ಬಾ ।।

ರದ ಜನರೊಳ್ ಕಲಹವೊ ।

ಬೆದರಿ ಸತಿ ಸುತ ಮೊಳಗೆ ಇವಗೆ ।

ಬೋಧಿಸುವ ಆಂಜನೇಯ ಶಿಲೆಪತಿ ।

ಬಾಧೆಯ ವತ್ತಾದರಿಯದೆ ।। 2 ।।


ಮಂದನೆಂದರೆ ನೀನೆ ದೇವಾ ।

ಇಂದುಪುರ ಮಂಗಳ ಬುಧ ಜೀವಾ ।

ಅಂದದ ಕವಿ ರಾಹು ಕೇತು ಮಂದಿ ।

ಮೊಂದಿಯಯೆಂಬುವ ಛಾಯಾಗ್ರಹರು ।।

ಇಂದ್ರ ಮುಂತಾದ ಖಳಾರಿಗುಪಮ ।

ಇಂದಿರಾಪತ್ತಿಲಾಕಗ ಯಂದು ಯೆಂದಿಗೂ ।

ನಂಬಿದೆ ಪದ ಛಂದದಲಿ ಕಾಯೋ ।

ಆದಿಕೇಶವ ಅಹಿಶಿಲಾಪತಿ ।। 3 ।।

****