ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಿರೀಶ ಹರೇ ಪ
ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1
ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2
ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3
ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4
ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5
ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6
ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7
ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8
ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9
ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10
ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
***