Showing posts with label ಉಡಕ್ಷಯ ಮುಖ್ಯ ಪ್ರಾಣ ನಿನ್ನ ನೋಡಿ rukmineesha vittala. Show all posts
Showing posts with label ಉಡಕ್ಷಯ ಮುಖ್ಯ ಪ್ರಾಣ ನಿನ್ನ ನೋಡಿ rukmineesha vittala. Show all posts

Monday, 2 August 2021

ಉಡಕ್ಷಯ ಮುಖ್ಯ ಪ್ರಾಣ ನಿನ್ನ ನೋಡಿ ankita rukmineesha vittala

 ಉಡಕ್ಷಯ ಮುಖ್ಯ ಪ್ರಾಣ ನಿನ್ನ ನೋಡಿ

ಹರುಷವಾಯಿತು ಮನಕೆ ಪ.


ನಿರುತದಿ ಎನ್ನಯ ಹೃದಯದಲ್ಲೇ ನಿಂದು ಶ್ರೀ

ಹರಿಯ ಸ್ಮರಣೆಯನು ಕರುಣಿಸು ಅನುದಿನ ಅ.ಪ.


ತ್ರೇತ್ರಾಯುಗದಲಿ ಜನಿಸಿ ರಘುಪತಿಯ ದಾಸನೆಂದೆನಿಸೆ

ಸೀತೆಗೆ ಉಂಗುರವಿತ್ತು ಶರಧಿಯ ಲಂಘಿಸಿ

ಮಾತೆಯ ರತ್ನ ರಘುನಾಥ ಗೊಪ್ಪಿಸಿದೆಯೋ 1


ದ್ವಾಪರ ಯಗದಲಿ ಕುಂತಿಯ ಕುಮಾರನೆಂದೆನಿಸಿ

ಪಾಪಿ ರಕ್ಕಸರನು ಸಂಹಾರ ಮಾಡಿ

ಪ್ರಖ್ಯಾತಿಯ ಪಡೆದು ಭೀಮನೆಂದೆನಿಸಿ 2


ಮೂರನೆ ಅವತಾರದಿ ಮುನಿ ಮಧ್ವರೆಂದೆನಿಸಿ

ಮಾರಮಣನ ಗುಣಗಳ ಪೊಗಳುತಲಿ

ಮೂರುತಿ ರುಕ್ಮೀಣೀಶ ವಿಠಲನ ಕರುಣದಿ 3

***