Showing posts with label ನರಕ ಎತ್ತಣದೋ ನರಕ ಎತ್ತಣದೋ vijaya vittala. Show all posts
Showing posts with label ನರಕ ಎತ್ತಣದೋ ನರಕ ಎತ್ತಣದೋ vijaya vittala. Show all posts

Thursday 17 October 2019

ನರಕ ಎತ್ತಣದೋ ನರಕ ಎತ್ತಣದೋ ankita vijaya vittala

ನರಕ ಎತ್ತಣದೋ ನರಕ ಎತ್ತಣದೋ
ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ

ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ
ದಾನ ಧರ್ಮಂಗಳು ಮಾಡಲೇಕೆ
ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ
ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1

ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ
ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ
ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ
ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2

ದೀಪ ಧೂಪಗಳೇಕೆ ನಾನಾ ಪರಿಯಲ್ಲಿ
ಸೋಪಸ್ಕರದ ಎಡೆ ಇಡಲೇತಕೆ
ಅಪಾರ ಮಹಿಮ ಅನಾಥರೊಡೆಯ ರಂಗ
ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3

ಭೂತದಯಗಳೇಕೆ ನೀತಿ ಎಂಬುದು ಏಕೆ
ಜಾತವೇದಸನಲ್ಲಿ ಕಳವಳವೇಕೆ
ಪಿನಾಕಿ ಸಖನೆಂದು
ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4

ಏನೇನು ಕರ್ಮದಾಚರಣೆ ಮಾಡುವದೇಕೆ
ಭಾನು ಉದಯವಿಡಿದು ತೊಳಲಲೇಕೆ
ದೀನನಾಗಿ ದಾತಾ ವಿಜಯವಿಠ್ಠಲ ಹರಿಯ
ಮಾನಸದಲಿ ಧ್ಯಾನ ಮಾಡುವ ಜನರಿಗೆ 5
*********