Showing posts with label ಜಯ ಮಂಗಳಂ ನಿತ್ಯ ಶುಭಮಂಗಳಮಂ ಧರೆಯೊಳು ನಿನ್ನಂಥಾ indiresha. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಮಂ ಧರೆಯೊಳು ನಿನ್ನಂಥಾ indiresha. Show all posts

Monday, 2 August 2021

ಜಯ ಮಂಗಳಂ ನಿತ್ಯ ಶುಭಮಂಗಳಮಂ ಧರೆಯೊಳು ನಿನ್ನಂಥಾ ankita indiresha

ಜಯಮಂಗಳಂ ನಿತ್ಯ ಶುಭಮಂಗಳಮಂ ಪ

ಧರೆಯೊಳು ನಿನ್ನಂಥಾ ತರುಣಿ ಮಣಿಯಳಾ ಕಾಣೆಹರಿಯ ವಕ್ಷಸ್ಥಳದಿ ಇರುವೆ ನೀನುಕರವೆತ್ತಿ ಮುಗಿಯುವೆನು ಸಿರಿಯೆ ತವ ಸೌಭಾಗ್ಯಎರಡು ಕಣ್ಣಿಗೆ ತೋರೆ ವರಮಹಾಲಕ್ಷ್ಮಿ1

ಜರದ ಪೀತಾಂಬರವು ಚರಣದೊಳಗಲಿಯುತಲಿಸಿರಿವಂತೆ ಮೂರು ಹೆಜ್ಜೆ ಬರುವಳಾಗಿಸೆರಗೊಡ್ಡಿ ಬೇಡುವೇನು ಹೆರಳಿನಲಿ ಮುಡಿದಿರುವಮರುಗು ಮಲ್ಲಿಗೆ ಚಂಪಕ ಸರಗಳನ್ನು ನೀಡೆ 2

ಇಂದುಮುಖಿ ನಿನ್ನಗಾರ್ತಿಯ ತಂದು ನಿಂದಿಹೆ ನಿಜಸುಂದರಾ ಮೃದು ಕೀರ್ತಿ ಪಾಡುತಿಹೆನೆಚಂದ್ರಶೇಖರ ಸುರರಿಂದ ವಂದಿತ ಚರಣಇಂದಿರೇಶನ ಸಹ ಬಂದಿಲ್ಲೆ ತೋರಿಸುಮುಖ3

****