ಜಯಮಂಗಳಂ ನಿತ್ಯ ಶುಭಮಂಗಳಮಂ ಪ
ಧರೆಯೊಳು ನಿನ್ನಂಥಾ ತರುಣಿ ಮಣಿಯಳಾ ಕಾಣೆಹರಿಯ ವಕ್ಷಸ್ಥಳದಿ ಇರುವೆ ನೀನುಕರವೆತ್ತಿ ಮುಗಿಯುವೆನು ಸಿರಿಯೆ ತವ ಸೌಭಾಗ್ಯಎರಡು ಕಣ್ಣಿಗೆ ತೋರೆ ವರಮಹಾಲಕ್ಷ್ಮಿ1
ಜರದ ಪೀತಾಂಬರವು ಚರಣದೊಳಗಲಿಯುತಲಿಸಿರಿವಂತೆ ಮೂರು ಹೆಜ್ಜೆ ಬರುವಳಾಗಿಸೆರಗೊಡ್ಡಿ ಬೇಡುವೇನು ಹೆರಳಿನಲಿ ಮುಡಿದಿರುವಮರುಗು ಮಲ್ಲಿಗೆ ಚಂಪಕ ಸರಗಳನ್ನು ನೀಡೆ 2
ಇಂದುಮುಖಿ ನಿನ್ನಗಾರ್ತಿಯ ತಂದು ನಿಂದಿಹೆ ನಿಜಸುಂದರಾ ಮೃದು ಕೀರ್ತಿ ಪಾಡುತಿಹೆನೆಚಂದ್ರಶೇಖರ ಸುರರಿಂದ ವಂದಿತ ಚರಣಇಂದಿರೇಶನ ಸಹ ಬಂದಿಲ್ಲೆ ತೋರಿಸುಮುಖ3
****
No comments:
Post a Comment