Showing posts with label ಮಹಾಲಕ್ಷುಮಿಗೆ ನಿತ್ಯಮಂಗಳ ಶುಭಮಂಗಳ prasannavenkata. Show all posts
Showing posts with label ಮಹಾಲಕ್ಷುಮಿಗೆ ನಿತ್ಯಮಂಗಳ ಶುಭಮಂಗಳ prasannavenkata. Show all posts

Friday, 15 November 2019

ಮಹಾಲಕ್ಷುಮಿಗೆ ನಿತ್ಯಮಂಗಳ ಶುಭಮಂಗಳ ankita prasannavenkata

by ಪ್ರಸನ್ನವೆಂಕಟದಾಸರು
ಮಹಾಲಕ್ಷುಮಿಗೆ ನಿತ್ಯಮಂಗಳ ಶುಭಮಂಗಳ ಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.

ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1

ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2

ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
*******