Showing posts with label ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ಇಂಥಾ ಕೃಷ್ಣಯ್ಯ purandara vittala. Show all posts
Showing posts with label ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ಇಂಥಾ ಕೃಷ್ಣಯ್ಯ purandara vittala. Show all posts

Tuesday, 3 December 2019

ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ಇಂಥಾ ಕೃಷ್ಣಯ್ಯ purandara vittala

ರಾಗ ಖಮಾಸ್. ಅಟ ತಾಳ

ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ||ಪ||
ಇಂಥಾ ಕೃಷ್ಣಯ್ಯ ನಿನ್ ಸುತನಾಗಿರುವನಲ್ಲೆ ||ಅ||

ಸೊಲ್ಲುಗಳು ಇಲ್ಲ ಅವನ ಮಹಿಮೆ ಪೇಳೆ
ಕಲ್ಲಾಗಿ ಗುಂಡಾಗಿ ನಿನ್ ತೊಟ್ಟಿಲೊಳಿಹನಮ್ಮ ||

ವನಜನಾಭನ್ನ ಎತ್ತುವ ಭಾಗ್ಯವ ಕಂಡು
ಪೊಂದುವ ಭಾಗ್ಯ ಹ್ಯಾಂಗಮ್ಮ ಪಡೆದೆ ||

ಕ್ಷೀರ ಸಾಗರದೊಡೆಯ ಓಡುತಲೆ ಬಂದು
ಕ್ಷೀರ ಬೇಡಿ ನಿನ್ನ ಕೊರಳ ಕಟ್ಟುವುದಕೆ ||

ನಿನ್ನ ಪುಣ್ಯಕೆ ಈಡು ಉಂಟೇನೆ ಪೇಳಮ್ಮ
ನಿನ್ನ ಮಂದಿರದಲಿ ಕೃಷ್ಣಯ್ಯ ನಲಿವನೆ ||

ಲೋಕದೊಡೆಯ ರಂಗ ಭಕ್ತಿಗೆ ಮೆಚ್ಚಿ ಬಂದ
ವೈಕುಂಠನಾಥ ಪುರಂದರವಿಠಲಯ್ಯ ||
***

pallavi

enthA puNyave gOpi ninage pELe

anupallavi

inthA krSnayya nin sutanAgiruvanalle

caraNam 1

sollugaLu illa avana mahime pELe kallAgi guNDAgi nin toTTiloLihanamma

caraNam 2

vanaja nAbhanna ettuva bhAgyava kaNDu ponduva bhAgya hyAngamma paDedeya

caraNam 3

kSira sAgaradoDeya Odutale bandu kSIra bEDi ninna koraLa kaTTUvudake

caraNam 4

ninna puNyake Idu uNTEne pELamma ninna mandiradali krSNayya nalivane

caraNam 5

lOkadoDeya ranga bhaktige mecci banda vaikuNTha nAtha purandara viTTalayya
***