Showing posts with label ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು shree krishna GAJAMUKHANE SIDDIVINAYAKANE VANDIPE SHARANU. Show all posts
Showing posts with label ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು shree krishna GAJAMUKHANE SIDDIVINAYAKANE VANDIPE SHARANU. Show all posts

Wednesday, 15 December 2021

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ankita shree krishna GAJAMUKHANE SIDDIVINAYAKANE VANDIPE SHARANU



 ರಾಗ ನಾಟ    ತಾಳ ಖಂಡಛಾಪು 
Audio by Vidwan Sumukh Moudgalya

ಶ್ರೀ ವ್ಯಾಸರಾಯರ ರಚನೆ 

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ॥ಪ॥

ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು  ॥ ಅ.ಪ॥

ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ  ಪದದ್ವಂದ್ವಕೆರಗುವೆ ನಿನ್ನ
ಸಂದೇಹ ಮಾಡದಲೆ ಇಂದು ಕರುಣಿಪುದು  ॥೧॥

ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ   ॥೨॥

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭ ಸಿರಿಕೃಷ್ಣ ಗತಿಪ್ರಿಯ   ॥೩॥
***

Gajamukhane siddhidayakane vandipe sharanu||p||

Trijaga vandita nada devadevane sharanu sujana vijaya vighnavanu palhiarive sharanu||a.pa||

Manda matiyenu pidisi gajamukhane indiresha pada vondi padiradi
sundarangane ninna pada dvandva kelaguvenu sandeha madade indu karudekudu||1||

Siddhi daya ninna hoddi veravenu nanu adri shayanana mahime bhaktadali pelva
shuddha matiyenu pottu uddharisa bekenna madhva bandhavu venu krsna gati priyane||2||
***

pallavi

gajamukhane siddhidaayakane vaMdipe sharaNu

anupallavi

trijagavaMditanaada dEvadEvane sharaNu sujanarige vighnavanu pariharipe sharaNu

caraNam 1

maMdamatiyanu biDisi caMda j~jaanavanittu iMdirEshana paada hoMdippa teradi
suMdaraaMgane padadvaMdvakeraguve ninna saMdEha maaDadale iMdu karuNipudu

caraNam 2

harana tanayane karuNaakarane suranaravarada moreya laalisi enna karagaLane piDidu
poreyadiddare biDenu nerede ninnaDigaLanu tvariyadiMdali nODu sharaNeMbe ninage

caraNam 3

siddhidaayaka ninna hoddi mereveno naanu abdishayanana mahime baddhadali pELva
shuddhamatiyanu koTTu uddharisabEkenna madhvavallabha sirikRuShNagati priya
***


ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು||pa||

ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ||a.pa||

ಮಂದ ಮತಿಯನು ಬಿಡಿಸಿ ಚಂದ ಸುಜ್ಞಾನ ವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ ನಿನ್ನ ಪದದ್ವಂದ್ವಕೆರಗುವೆನು
ಸಂದೇಹ ಮಾಡದಲೆ ಇಂದು ಕರುಣಿಪುದು ||1||

ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ ||2||

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭವೇಣುಕೃಷ್ಣಗತಿಪ್ರಿಯ||3||
*******