..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಜಾನಕೀರಮಣನೆ ಮಾನದಿ ಸಲಹೆನ್ನ ಪ
ಮಾನಾಪಮಾನ ನಿಂದೋ ದೀನರ ಬಂಧೋ ಅ.ಪ
ದಾಸದಾಸರ ದಾಸ ದಾಸನಾಗುವೆನೆಂದು
ಬೇಡುವೆ ದಯಸಿಂಧೋ ನೀಡು ವರವ ಬಂಧೊ 1
ನಂದತೀರ್ಥರ ಮತ ಎಂದೊ ಎನಗೆ ಹಿತ
ಪೊಂದಿಸಬೇಕೊ ಸೀತಾಪತಿಯೆ ಕೇಳೆಲೊದಾತ 2
ನಾಮಗಿರಿ ಲಕ್ಷ್ಮೀಸ್ವಾಮಿ ಶ್ರೀ ನರಹರೆ
ಚರಣ ಕಮಲಯುಗ ಸ್ಮರಣೆ ಸ್ಥಿರಪಡಿಸೊ 3
***