Showing posts with label ಕದರ ಮಂಡಲಗಿಯ ಕರುಣಿ ಹನುಮರಾಯ neleyadikeshava KADARAMANDALAGIYA KARUNI HANUMARAYA. Show all posts
Showing posts with label ಕದರ ಮಂಡಲಗಿಯ ಕರುಣಿ ಹನುಮರಾಯ neleyadikeshava KADARAMANDALAGIYA KARUNI HANUMARAYA. Show all posts

Friday, 27 December 2019

ಕದರ ಮಂಡಲಗಿಯ ಕರುಣಿ ಹನುಮರಾಯ ankita neleyadikeshava KADARAMANDALAGIYA KARUNI HANUMARAYA

 Audio by Vidwan Sumukh Moudgalya



ಕದರಮಂಡಲಗಿಯ ಶ್ರೀ ಹನುಮಂತ ( ಕಾಂತೇಶ ) ನ ಗುಣಗಾನದ ಕೃತಿ

 ರಾಗ : ತೋಡಿ    ಆದಿತಾಳ

ಕದರ ಮಂಡಲಗಿಯ ಕರುಣಿ ಹನುಮರಾಯ 
ಸದುಗುಣವಂತನೆ ಹಣುವಂತನೆ ॥ಪ॥

ಅಂಜನೆಯ ವರಸೂನು ಆಶ್ರಿತ ಕಾಮಧೇನು
ಮಂಜುಳ ಗಾನ ಗೀತ ಪರಮ ವಿಖ್ಯಾತ
 ಸಂಜೀವನವ ತಂದು ವ್ಯೋಮ ಮಾರ್ಗದಿ ಬಂದ
ಅಂಜದ ಗುಣವಂತನೆ ಹಣುವಂತನೆ ॥೧॥

ಶಶಿಧರಾನ್ವಯ ದೂತ ಸೌಮಿತ್ರಿಯ ವರೂಥ
 ಅಸಮಾಸ್ತ್ರಧೃತವೇದ ಅಮಿತ ಪ್ರಖ್ಯಾತ 
ಆ ಸುಗ್ರೀವ ಜಾಮಾತ ಮುಖ್ಯ ಪ್ರಾಣನಾಥ 
ವಿಶಾಲ ಗುಣವಂತನೆ ಹಣುವಂತನೆ ॥೨॥

ಕ್ಷೋಣಿಯೊಳು ಕನಕದಾಸನ ನೆರಳು ಅನಕ 
ಏನು ಬಲಿಸಿದೆಯೊ ಔಷಧಿಯ ಕುಣುಕ 
ನೀನಿದ್ದರೆ ಕನಕ ಪ್ರಾಣ ತೆರಳುವ ತನಕ 
ಶ್ರೀನಿಧೇ ಆದಿಕೇಶವ ಎನ್ನ ಜನಕ ॥೩॥
*****

ಕದರ ಮಂಡಲಗಿಯ ಹನುಮರಾಯ |
ಸದುಗುಣವಂತನೆ ಹನುಮಂತನೆ || ಪ. || 

ಅಂಜನೆಯ ವರಸೂನು ಆಶ್ರಿತ ಕಾಮಧೇನು 
ಮಂಜುಳ ಗಾನ ಗೀತ ಪರಮ ವಿಖ್ಯಾತ|| 
ಸಂಜೀವನ ತಂದ ವ್ಯೋಮ ಮಾರ್ಗದಿ 
ಬಂದ ಅಂಜದ ಗುಣವಂತನೆ ಹನುಮಂತನೆ || ೧ ||

ಶಶಿಧರಾನ್ವಯ ದೂತ ಸೌಮಿತ್ರಿಯ ವರೂಢ 
ಅಸಮಾಸ್ತ್ರ ಧೃತ ವೇದ ಅಮಿತ ಪ್ರಖ್ಯಾತ|| 
ಆ ಸುಗ್ರೀವ ಜಾಮಾತ ಮುಖ್ಯ ಪ್ರಾಣನಾಥ 
ವಿಶಾಲ ಗುಣವಂತನೆ ಹನುಮಂತನೆ || ೨ ||          '

ಕ್ಷೋಣಿಯೊಳು ಕನಕದಾಸನ ನೆರಳು ಅನಕ 
ಏನು ಬಲಿಸಿದೆಯೊ ಔಷಧಿಯ ಕುಣುಕ || 
ನೀನಿದ್ದರೆ ಕನಕ ಪ್ರಾಣ ತೆರಳುವ ತನಕ 
ಶ್ರೀನಿಧೇ ಆದಿಕೇಶವ ಎನ್ನ ಜನಕ        `|| ೩ ||
*********