Showing posts with label ದೈತ್ಯರಲ್ಲೆ ದುರ್ಜನ ಸೇವೆ ಪರರ ಲಾಭವನು ಧರಿಯೊಳು gurumahipati. Show all posts
Showing posts with label ದೈತ್ಯರಲ್ಲೆ ದುರ್ಜನ ಸೇವೆ ಪರರ ಲಾಭವನು ಧರಿಯೊಳು gurumahipati. Show all posts

Wednesday, 1 September 2021

ದೈತ್ಯರಲ್ಲೆ ದುರ್ಜನ ಸೇವೆ ಪರರ ಲಾಭವನು ಧರಿಯೊಳು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ದೈತ್ಯರಲ್ಲೆ ದುರ್ಜನ ಸೇವೆ ಪ 


ಪರರ ಲಾಭವನು ಧರಿಯೊಳು ನೋಡುತ | ಧರಿಸಲಾರ ಧಿಕ್ಕರಿಸುತ ನುಡಿವನು | ಪರರ ಹಾನಿಯಲಿ ಮರುಗದೆ ಮನದೊಳು | ಹರುಷ ಬಡವುತ ಚರಿಸು-ನೈಯ್ಯಾ 1 

ಖಳ್ಳೆದೆಯೊಳು ಮನದಲ್ಲಿ ಕಪಟವು | ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ | ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ | ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ 2 

ಸತಿ | ಎನ್ನ ಮಗÀನೆ ಮಗ ಯನ್ನ ಗುಣವೇಗುಣ | ತನ್ನನೆ ಹೊಗಳುತ ಅನ್ಯಕ್ಹಳಿವರೆ 3 

ಆವದು ಅರಿಯದ ಭಾವಿಕ ಜನರನು | ತಾವೀಗ ಕಂಡರೆ ಆವನನುಗ್ರಹ | ಆವ ಮಂತ್ರ ನಿನಗಾವ ನ್ಯಾಸವೇ | ದಾವಾಗ ಛಲಣಿಯ ಭಾವಿಪರವರೇ 4 

ತಂದೆ ಮಹಿಪತಿ ನಂದನ ಪ್ರಭುವಿನಾ | ಒಂದರಗಳಿಗೆಯ ಛಂದದಿ ಸ್ಮರಿಸದೆ | ನಿಂದೆಯ ಮನೆಯೊಳು ಸಂದಿಸಿ ಅನುದಿನಾ | ಮಂದ ಮತಿಯರೇ 5

***