Showing posts with label ಳಳ- RSS- ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ others MADHAVANA CHITTADALI ARALIDDA CHITRAGALE rss. Show all posts
Showing posts with label ಳಳ- RSS- ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ others MADHAVANA CHITTADALI ARALIDDA CHITRAGALE rss. Show all posts

Saturday, 6 February 2021

ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ others MADHAVANA CHITTADALI ARALIDDA CHITRAGALE rss


rss song

 ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ

ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ ||


ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ

ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ

ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸಬನ್ನಿ || 1 ||


ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ

ಸಂಘ ಮುರಿವ ತಂತ್ರಗಳಿಗೆ ಹಿಡಿದ ಗುರಾಣಿ ಹಲಗೆ ಕಟುವುಂಡ ನೀಲಕಂಠ

ಅವನ ಮಣ್ಣಿನ ಮಮತೆ ನೋವ ನುಂಗುವ ಕ್ಷಮತೆ ನನ್ನಲ್ಲೂ ನೆಲೆಸಬನ್ನಿ || 2 ||


ಹಿಂದು ಭಾವವ ಬಸಿದು ಒಡೆದ ಮನೆಯನು ಬೆಸೆದು ಏಕತೆಯ ಕೋಟೆ ಕಟ್ಟಿ

ಮೇಲು ಕೀಳನು ತೊಳೆದು ನೈಜ ಧರ್ಮವು ಹೊಳೆದು ಶ್ರೇಷ್ಠತೆಯ ಶಿಖರ ಮುಟ್ಟಿ

ಅವನ ಸಮರಸ ಭಾವ ಜಗವ ಗೆಲ್ಲುವ ಸ್ನೇಹ ನನ್ನಲ್ಲೂ ನೆಲೆಸ ಬನ್ನಿ || 3 ||

***