Showing posts with label ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು jagannatha vittala SIRI RAMANA TAVA CHARANA DORAKUVUDU HYANGINNU. Show all posts
Showing posts with label ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು jagannatha vittala SIRI RAMANA TAVA CHARANA DORAKUVUDU HYANGINNU. Show all posts

Wednesday 1 December 2021

ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು ankita jagannatha vittala SIRI RAMANA TAVA CHARANA DORAKUVUDU HYANGINNU






ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ 
ನರಕಕ್ಕೆ ಗುರಿಯಾದೆನೊ ,ಇನ್ನು 
ಸಿರಿರಮಣ ತವ ಚರಣ ದೊರಕುವದು 
ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು 
                            ||ನರಹರಿಯೆ||
ಪರಮ ಪಾಪಿಷ್ಠ ನಾನು

ಕೆರೆ ಬಾವಿ ದೇವಮಂದಿರಗಳನು ಕೆಡಿಹಿ ನ
ಹಿರಿದಾಗಿ ಮನೆ ಕಟ್ಟಿದೆ
ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು 
ಥರಥರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯ ಮರ 
ಕಡಿಸಿ ಕೊರೆಸಿ ಬಾಗಿಲ ಮಾಡಿದೆ
ವರ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ 
ಪರಿಪರಿಯ ಸೌಖ್ಯ ಸುರಿದೆ ,ಮೆರೆದೆ
                               ||ಸಿರಿರಮಣ||

ಹೊಸ ಮನೆಯ ಕಂಡು ಬಲು ಹಸಿದು 
ಭೂಸುರರು ಬರೆ ಕೊಸರಿ ಹಾಕುತ ತಬ್ಬುತ
ಶಶಿಮುಖಿಯೆ ಬಾರೆಂದು ಅಸುವನೆ ಬಣ್ಣಿಸುತ 
ಹಸನಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶಿ ದಿನತ್ರಯದಿ 
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆಲುತ
ಕುಸುಮಗಂಧಿಯ ರಮಿಸುತ ,ಸತತ
                          ||ಸಿರಿರಮಣ||

ಸ್ನಾನ ಸಂಧ್ಯಾನ ಅತಿ ಮೌನ ಗಾಯತ್ರಿಜಪ 
ಭಾನುಗರ್ಘ್ಯವನು ಕೊಡದೆ
ಶ್ರೀನಿವಾಸನೆ ನಿನ್ನ ಜ್ಞಾನಪೂರ್ವಕ ಪೂಜೆ 
ನಾನೊಂದು ಕ್ಷಣ ಮಾಡದೆ
ಬ್ಯಾನೆ ಬಂದಂತಾಗೆ ಹೀನ ವಿಧವೆಯ ಕೈಯ 
ನಾನಾ ವಿಧಾನ್ಯ ತಿಂದೆ-ನೊಂದೆ
ದೀನತ್ವದಲಿ ದಾನ-ಧರ್ಮವನು ಮಾಡದೆ 
ಶ್ವಾನನಂದದಿ ಚರಿಸಿದೆ ,ಬರಿದೆ
                              ||ಸಿರಿರಮಣ||

ಸಾಕಲ್ಯದಿಂದ ಸಾಲಿಗ್ರಾಮಕಭಿಷೇಕ 
ಆಕಳ್ಹಾಲಲಿ ಮಾಡದೆ
ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು 
ಬದುಕ-ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿಗುಡಿ ನಶ್ಯಪುಡಿ 
ಹಾಕಿ ಭಂಗಿಯ ಸೇದಿದೆ 
ಲೋಕನಿಂದಕನಾಗಿ ಪಾತಕಕೆ ಕೈ ಹಚ್ಚಿ 
ಅನೇಕ ಜೂಜುಗಳಾಡಿದೆ, ಬಿಡದೆ
                           ||ಸಿರಿರಮಣ||

ಉತ್ತಮ ಬ್ರಾಹ್ಮಣರ ವೃತ್ತಿಯನು ಕೆಡಿಸಿ 
ಬ್ರಹ್ಮಹತ್ಯಗಾರನು ಎನಿಸಿದೆ
ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ 
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ 
ಕುತ್ತಿಗೆಯನು ಕೊಯಿಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಹೊಡೆಯುತಿರೆ 
ಮೃತ್ಯುದೇವರೆ ಎನಿಸಿದೆ ಬಿಡದೆ
                              ||ಸಿರಿರಮಣ||

ಬಾದರಾಯಣ ಕೃತ ಭಾಗವತ ಕೇಳುವಲ್ಲಿ 
ಆದರವು ಪುಟ್ಟಲಿಲ್ಲ
ವಾದಿಗಳ ಮತವಳಿದು ಮಧ್ವಸಿದ್ಧಾಂತದ 
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕ್ಕೆ ಸಮನಾದ ವೈಷ್ಣವರ 
ಪಾದಕ್ಕೆ ಬೀಳಲಿಲ್ಲ
ವೇದಬಾಹ್ಯರಿಗೆರಗಿ ಅಪಸವ್ಯಮನನಾಗಿ 
ಓದಿಕೊಂಡೆನೊ ಇದೆಲ್ಲ ,ಸಲ್ಲ
                              ||ಸಿರಿರಮಣ||

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ 
ಗತಿಯೇನು ಪೇಳೊ ಕೊನೆಗೆ
ಸತತ ತವಧ್ಯಾನದಲಿ ರತನಾಗಿ ಇರುವ 
ಸನ್ಮತಿಯ ಪಾಲಿಸಯ್ಯ ಎನಗೆ
ಪತಿತ ಪಾವನನೆಂಬ ಬಿರುದು ಅವನಿಯ ಮೇಲೆ 
ಶ್ರುತಿ ಸಾರುತಿದೆಯೋ ಹೀಗೆ
ಶಿತಿಕಂಠನುತ ಜಗನ್ನಾಥವಿಠ್ಠಲ ನಿನಗೆ 
ನುತಿಸಿ ಮೊರೆಹೊಕ್ಕೆ ಹರಿಯೇ ದೊರೆಯೇ
                               ||ಸಿರಿರಮಣ||
***

pallavi

siri ramaNa tava caraNa dorakuvadu hyAginnu parama pApSTa nAnu

anupallavi

narahariyE ninna nAma smaraNe mADade vyartha narakakke guriyAdenO innu

caraNam 1

kerebhAvi dEva mandiragaLanu keDisi divya hiridAgi mane gaTTide
nere naDeva mArgadoLu aravaTTigegaLanu tharatharadi bicci tegede
parama sambbhramadinda araLi ariLiya mara kaDisi korasi bAgila mADide
pavana mandirava mugisi haruSa citrava barisi paripariya saukhya suride merede

caraNam 2

hosa maneya kaND balu hasidu bhUsuraru balre kosari hAkuta dabbuta
shashi mukhiye bArendu asavasadi baNNisuta hasanAgi avLLOsuta
dashami EkAdashi dinadali ashana veraDhottunnuta
ghasaghasane tAmbUla pashuvinandadi meddu kusuma gandhiya ramisuta naguta

caraNam 3

snAna sandhyAna atimOna gAyatrI japa bhAnu garghyavanu koDade
dInatvadali dAna dharmavanu mADade shvAnanandadi cariside
shrInivAsane ninna anupUrvaka sEve nAnondu caNa mADade
byAne bandantAge hIna vidhaveya kaiya nAnA vidhAnya tinde nonde

caraNam 4

sAkalyadinda sAligrAmabhiSEka vAkaLLhAlali mADade
nAlkeNTu nAyigaLa sAki maneyoLu baduk bEkendu hAlu hoide
kAku buddhigaLinda guDi guDi nashyapuDi hAki bhangiya sEride
lOkanindakanAgi pApi kaihatti anEka jUjugaLADide biDade

caraNam 5

bAdharAyaNa krta bhAvata kELuvalli Adaravu puTTalillA
vAdigaLa matavoLida madhva siddhAntada hAdige hOgalillA
shOdisida cinnakke smarAda vaiSNavara pAdakke bILalilla
vEda bAhyarigeragi apasaviya mananAgi Odi koNDenO idella salla

caraNam 6

uttama brAhamara vrattiyenu keDisi brahmahatya gAramu eniside
matte munjimaduve smayakkE nAhOgi satta suddiya pELide
vitta viddhavara benhatti dUtaragaLuhi kuttigeyanu koyiside
hattu janareNhenake nitaya kalloDeyutire mrtya dEvare eniside biDade

caraNam 7

kSitiyoLage innAru hitava bayasuvarenage gatiyEnu pELO konege
satata tava dhyAnadali ratanAgi iruva sanmatiya pAlisaya enage
patita pAvananemba birudu avaniyamElE shruti sArutideyO hIge
shitikaNThanuta jagannAtha viThaLa ninage nutisi morahokke hariyE dhoreye
***

ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು | ಪ |
ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ | ನರಕಕ್ಕೆ ಗುರಿಯಾದೆನೋ | ಹರಿಯೇ | | ಅ.ಪ |

ಕೆರೆ ಭಾವಿ ದೇವ ಮಂದಿರಗಳನ್ನು ಕೆಡವಿ ನಾ ಹಿರಿದಾಗಿ ಮನೆ ಕಟ್ಟಿದೆ |
ನೆರೆನಡೆವ ಮಾರ್ಗದಾ ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ |
ಪರಮ ಸಂಭ್ರಮದಿಂದ ಅರಳೆಯಮರ ಕಡಿಸೆ ಕೊರೆಸಿ ಬಾಗಿಲ ಮಾಡಿದೆ | ವರಮಂದಿರವ ಮುಗಿಸಿ ಹರುಷ ಚಿತ್ರವ ತೆಗೆಸಿ ಪರಿಪರಿಯ ಸೌಖ್ಯ ಸುರಿದೆ | ಮೆರೆದೆ || ೧ ||

ಹೊಸ ಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತಾ |
ಶಶಿಮುಖಿಯೇ ಬಾರೆಂದು ಅಸುವನೆ ಬಣ್ಣಿಸುತ ಹಸನಾಗಿ ಅವಳೊಲಿಯುತ |
ದಶಮಿ ಏಕಾದಶಿ ದ್ವಾದಶಿ ದಿನತ್ರಯದಿ ಅಶನವೆರಡು ಹೊತ್ತುಣ್ಣು ತಾ |
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮಗಂಧಿಯ ರಮಿಸುತಾ | ಸತತಾ | ೨ |

ಸ್ನಾನ ಸಂಧ್ಯಾನ ಅತಿಮೌನ ಗಾಯತ್ರಿ ಜಪ ಭಾನುಗರ್ಥ್ಯವನ್ನು ಕೊಡದೆ |
ಶ್ರೀನಿವಾಸನೆ ನಿನ್ನ ಜ್ಞಾನಪೂರ್ವಕ ಪೂಜೆ ನಾನೊಂದು ಕ್ಷಣ ಮಾಡದೆ |
ಬೇನೆ ಬಂದಂತಾಗಿ ಹೀನ ಸಕೇಶಿಯ ಕೈಲಿ ನಾನಾ ವಿಧಾನ್ನ ಉಂಡೆ |
ಜೀನತ್ವದಲ್ಲಿ ದುಡ್ಡು ದಾನ ಧರ್ಮವ ಕೊಡದೆ ಜ್ಞಾನನಂದದಿ ಚರಿಸಿದೆ | ಬರಿದೆ | ೩ |

ಸಾಕಲ್ಯದಿಂದ ಶಾಲಿಗ್ರಾಮದಭಿಷೇಕ ಆಕಾಲಲಿ ಮಾಡದೆ |
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕಬೇಕೆಂದು ಹಾಲು ಹೊಯ್ದೆ |
ಕಾಕುಬುದ್ಧಿಗಳಿಂದ ಗುಡಗುಡಿ ನಶ್ಯಮಡಿ ಹಾಕಿ ಭಂಗಿಯ ಸೇದಿದೆ |
ಲೋಕನಿಂದಕನಾಗಿ ಪಾತಕವನ ಅನೇಕ ಜೂಜುಗಳಾಡಿದೆ | ಹರಿಯೇ || ೪ ||

ಉತ್ತಮ ಬ್ರಾಹ್ಮಣರ ವೃತ್ತಿಯನೆ ಕೆಡೆಸಿ ಬ್ರಹ್ಮತ್ಯಗಾರನೆನಿಸಿದೆ |
ಮತ್ತೆ ಮುಂಜಿ ಮದುವೆ ಮನೆಯೊಳಗೆ ನಾ ಹೋಗಿ ಸತ್ತ ಸುದ್ದಿಯ ಪೇಳೆದೆ |
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯ ನಾ ಕೊಯಿಸಿದೆ |
ಹತ್ತು ಜನ ಎನ್ನೆಣಕೆ ನಿತ್ಯ ಕಲ್ಲೊಡೆಯುತಿರೆ ಮೃತ್ಯು ದೇವತೆ ಎನಿಸಿದೆ | ಬಿಡದೇ || ೫ ||

ಬಾದರಾಯಣ ಕೃತ ಭಾಗವತ ಕೇಳಲ್ಲಿ ಆದರವು ಪುಟ್ಟಲಿಲ್ಲ |
ವಾದಿಗಳ ಮತವಳಿದು ಮಧ್ವಸಿದ್ಧಾಂತದ ಹಾದಿಗೇ ಹೋಗಲಿಲ್ಲ |
ಶೋಧಿಸಿದ ಚಿನ್ನಕ್ಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ |
ವೇದ ಬಾಹಿರವಾಗಿ ಅಪಸವ್ಯಮನನಾಗಿ ಓದಿಕೊಂಡೆನೊ ಇದೆಲ್ಲ | ಸುಳ್ಳಾ || ೬ ||

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಪೇಳ್ವ ಕೊನೆಗೆ |
ಸತತ ತವ ಧ್ಯಾನದಲ್ಲಿ ರತನಾಗಿ ಇರುವ ಸನ್ಮತಿಯನೆ ಪಾಲಿಸಿಗ |
ಪತಿತ ಪಾವನನೆಂಬೊ ಬಿರುದು ಅವನಿಯ ಮೇಲೆ ಶೃತಿ ಸಾರುತಿದೆಯೋ ಹೀಗೆ |
ಶಿತಿಕಂಠನುತ ಜಗನ್ನಾಥ ವಿಠಲ ನಿನ್ನ ತುತಿಸಿ ಮೊರೆಹೊಕ್ಕೆ ಹರಿಯೇ | ದೊರೆಯೇ || ೭ ||
***

Siriramaṇa tava caraṇa dorakuvudu hyāṅginnu

parama pāpiṣṭha nānu | pa |

narahariye ninna nāmasmaraṇe māḍade |

narakakke guriyādenō | hariyē | | a.Pa |

kere bhāvi dēva mandiragaḷannu keḍavi nā hiridāgi mane kaṭṭide |

nerenaḍeva mārgadā aravaṭṭigegaḷanu tharatharadi bicci tegede |

parama sambhramadinda araḷeyamara kaḍise koresi bāgila māḍide |

varamandirava mugisi haruṣa citrava tegesi paripariya saukhya suride | merede || 1 ||

hosa maneya kaṇḍu balu hasidu bhūsuraru bare kosari hākuta dabbutā |

śaśimukhiyē bārendu asuvane baṇṇisuta hasanāgi avaḷoliyuta |

daśami ēkādaśi dvādaśi dinatrayadi aśanaveraḍu hottuṇṇu tā |

ghasaghasane tāmbūla paśuvinandadi meddu kusumagandhiya ramisutā | satatā | 2 |

snāna sandhyāna atimauna gāyatri japa bhānugarthyavannu koḍade |

śrīnivāsane ninna jñānapūrvaka pūje nānondu kṣaṇa māḍade |

bēne bandantāgi hīna sakēśiya kaili nānā vidhānna uṇḍe |

jīnatvadalli duḍḍu dāna dharmava koḍade jñānanandadi cariside | baride | 3 |

sākalyadinda śāligrāmadabhiṣēka ākālali māḍade|

Nākeṇṭu nāyigaḷa sāki maneyoḷu badukabēkendu hālu hoyde |

kākubud’dhigaḷinda guḍaguḍi naśyamaḍi hāki bhaṅgiya sēdide |

lōkanindakanāgi pātakavana anēka jūjugaḷāḍide | hariyē || 4 ||

uttama brāhmaṇara vr̥ttiyane keḍesi brahmatyagāraneniside |

matte mun̄ji maduve maneyoḷage nā hōgi satta suddiya pēḷede |

vittaviddavara benhatti dūtara kaḷuhi kuttigeya nā koyiside |

hattu jana enneṇake nitya kalloḍeyutire mr̥tyu dēvate eniside | biḍadē || 5 ||

bādarāyaṇa kr̥ta bhāgavata kēḷalli ādaravu puṭṭalilla |

vādigaḷa matavaḷidu madhvasid’dhāntada hādigē hōgalilla |

śōdhisida cinnakke samarāda vaiṣṇavara pādakke bīḷalilla |

vēda bāhiravāgi apasavyamananāgi ōdikoṇḍeno idella | suḷḷā || 6 ||

kṣitiyoḷage innāru hitava bayasuvarenage gatiyēnu pēḷva konege |

satata tava dhyānadalli ratanāgi iruva sanmatiyane pālisiga |

patita pāvananembo birudu avaniya mēle śr̥ti sārutideyō hīge |

śitikaṇṭhanuta jagannātha viṭhala ninna tutisi morehokke hariyē | doreyē | 7 |
***



Siriramana tava charana dorakuvudu hyaanginnu
Parama paapishta naanu || pa ||

Narahariye ninna naamasmarane maadade|
narakakke Guriyaadeno || a pa ||

Kere bhaavi mandiragalanu kedahi naa hiridaagi mane kattide |
Nerenadevamaargadaa aravattigegalanu tharathadibicchi tegede |
Paramasan bhramadinda araleya mara koresi baagila maadide |
Vara mandirava mugisi harusha chitrava tegesi paripariya soukhya surude|merede || 1 ||

Saakalyadinda shaaligraamadabhisheka aakalhaalali maadade |
Naakentu naayigala saaki maneyolu baduka bekendu haalu hoyde ||
Kaaku buddigalinda gudagudi nashyapudi haaki bhangiya sedide |
Loka nindakanaagi paatakava necchi aneka joojugalaadide | hariye || 2 ||

Uttama braahmanara vrattiyane kedisi brahmahatyagaaranu eniside |
Matte munji maduve maneyolage naa pogi satta suddiya pelide ||
Vittaviddavarabenhatti dootara kalisi kuttigeya naa koyiside |
Hattu jana yenhenake nitya kalhodeyutire mrutyu devate eniside|bidade || 3 ||

Kshitiyolage innaaru hitava bayasuvarenage gatiyenu pelo konege |
Satata tava dhyaanadali ratanaagi iruva sanmatiyane paalisiga ||
Patita paavananenbo birudu avaniya mele shruti saarutideyo heege |
Shishikanthanuta jagannaathavithala ninna stutisi more hokke hariye | doreye || 4 |
***


ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು
ಪರಮ ಪಾಪಿಷ್ಠ ನಾನು || ಪ||
ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ
ನರಕಕ್ಕೆ ಗುರಿಯಾದೆನೊ ಇನ್ನು ||ಅ.ಪ||

ಕೆರೆ ಭಾವಿ ದೇವಮಂದಿರಗಳನು ಕೆಡಿಸಿ , ದಿವ್ಯ ಹಿರಿದಾಗಿ ಮನೆ ಕಟ್ಟಿದೆ
ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲ ಮಾಡಿದೆ
ಪವನ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ ಮೆರೆದೆ ||೧||

ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸವಸದಿ ಬಣ್ಣಿಸುತ ಹಸನಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶಿ ದಿನದಲಿ ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮಗಂಧಿಯ ರಮಿಸುತ ನಗುತ ||೨||

ಸ್ನಾನ ಸಂಧ್ಯಾನ ಅತಿ ಮೌನ ಗಾಯತ್ರಿಜಪ ಭಾನುಗರ್ಘ್ಯವನು ಕೊಡದೆ
ದೀನತ್ವದಲಿ ದಾನ-ಧರ್ಮವನು ಮಾಡದೆ ಶ್ವಾನನಂದದಿ ಚರಿಸಿದೆ
ಶ್ರೀನಿವಾಸನೆ ನಿನ್ನ ಆನುಪೂರ್ವಕ ಸೇವೆ ನಾನೊಂದು ಕ್ಷಣ ಮಾಡದೆ
ಬ್ಯಾನೆ ಬಂದಂತಾಗೆ ಹೀನ ವಿಧವೆಯ ಕೈಯ ನಾನಾ ವಿಧಾನ್ಯ ತಿಂದೆ-ನೊಂದೆ ||೩||

ಸಾಕಲ್ಯದಿಂದ ಸಾಲಿಗ್ರಾಮಕಭಿಷೇಕಭಿಷೇಕವಾಕಳ್ಹಾಲಲಿ ಮಾಡದೆ
ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ-ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿಗುಡಿ ನಶ್ಯಪುಡಿ ಹಾಕಿ ಭಂಗಿಯ ಸೇದಿದೆ
ಲೋಕನಿಂದಕನಾಗಿ ಪಾಪಿ ಕೈ ಹಚ್ಚಿ ಅನೇಕ ಜೂಜುಗಳಾಡಿದೆ ಬಿಡದೆ || ೪||

ಬಾದರಾಯಣ ಕೃತ ಭಾಗವತ ಕೇಳುವಲ್ಲಿ ಆದರವು ಪುಟ್ಟಲಿಲ್ಲ
ವಾದಿಗಳ ಮತವಳಿದ ಮಧ್ವಸಿದ್ಧಾಂತದ ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕ್ಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದಬಾಹ್ಯರಿಗೆರಗಿ ಅಪಸವ್ಯಮನನಾಗಿ ಓದಿಕೊಂಡೆನೊ ಇದೆಲ್ಲ ಸಲ್ಲ ||೫||

ಉತ್ತಮ ಬ್ರಾಹ್ಮಣರ ವೃತ್ತಿಯನು ಕೆಡಿಸಿ ಬ್ರಹ್ಮಹತ್ಯಗಾರನು ಎನಿಸಿದೆ
ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯನು ಕೊಯಿಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಹೊಡೆಯುತಿರೆ ಮೃತ್ಯುದೇವರೆ ಎನಿಸಿದೆ ಬಿಡದೆ ||೬||

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಪೇಳೊ ಕೊನೆಗೆ
ಸತತ ತವಧ್ಯಾನದಲಿ ರತನಾಗಿ ಇರುವ ಸನ್ಮತಿಯ ಪಾಲಿಸಯ್ಯ ಎನಗೆ
ಪತಿತ ಪಾವನನೆಂಬ ಬಿರುದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ
ಶಿತಿಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸಿ ಮೊರೆಹೊಕ್ಕೆ ಹರಿಯೇ ದೊರೆಯೇ ||೭||
*****

ರಾಗ ಮೋಹನ (ಭೂಪ್) ಝಂಪೆತಾಳ raga tala may differ in audio)

ಸಿರಿರಮಣ ತವ ಚರಣ ಸೇವೆ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು ||ಪ||

ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ
ನರಕಕ್ಕೆ ಗುರಿಯಾದೆನೋ ಹರಿಯೆ|| ಅ.ಪ||

ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ
ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ
ವಶವಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು
ಕುಸುಮ ಗಂಧಿಯ ರಮಿಸುತ ಸತತ||1||

ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ
ಹಿರಿದಾಗಿ ಮನೆ ಕಟ್ಟದೆ
ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು
ಧರಧರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ
ಕೊರೆಸಿ ಬಾಗಿಲು ಮಾಡಿದೆ
ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ
ಪರಿಪರಿಯ ಸುಖ ಸಾರಿದೇ ಮೆರೆದೆ||2||

ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ
ಆಕಳ ಹಾಲಲಿ ಮಾಡದೆ
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ
ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ
ಹಾಕಿ ಭಂಗಿಯಾ ಸೇದಿದೆ
ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ
ನೇಕ ಜೂಜುಗಳಾಡಿದೇ ಬಿಡದೆ ||3||

ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ
ಭಾನುಗಘ್ರ್ಯವನು ಕೊಡದೆ
ಹೀನತ್ವ ವಹಿಸಿ ದಾನ ಧರ್ಮವ ಮಾಡದೆ
ಶ್ವಾನನಂದದಿ ಚರಿಸಿದೇ
ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ
ನಾನೊಂದು ಕ್ಷಣಮಾಡದೇ
ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ
ನಾನ ವಿಧಾನ್ನ ತಿಂದೇ ನೊಂದೇ ||4||

ಬಾದರಾಯಣ ಕೃತ ಭಾಗವತ ಕೇಳಲಿಕೆ
ಆದರವೆ ಪುಟ್ಟಲಿಲ್ಲಾ
ವಾದಿಗಳ ಮತವಳಿದ ಮಧ್ವ ಸಿದ್ಧಾಂತದ
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದ ಬಾಹಿರನಾಗಿ ಅಪಸವ್ಯ ಮನನಾಗಿ
ಓದಿಕೊಂಡೆನೋ ಇದೆಲ್ಲ ಸುಳ್ಳ ||5||

ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ
ಹ್ಮಹತ್ಯಗಾರನು ಎನಿಸಿದೆ
ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯ್ಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ
ಮೃತ್ಯು ದೇವತೆಯೆನಿಸಿದೆ ಬಿಡದೇ||6||

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ
ಗತಿಯೇನು ಪೇಳೊ ಕೊನೆಗೆ
ಸತತ ತವ ಧ್ಯಾನದಲಿ ರತನಾಗಿ ಇರುವ ಸ
ನ್ಮತಿಯ ಪಾಲಿಸಯ್ಯ ಎನಗೆ
ಪತಿತಪಾವನನೆಂಬ ಬಿರಿದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ
ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸದೆ ಬೆಂಡಾದೆ ಕಾಯೋ ಹರಿಯೆ 7
******