Showing posts with label ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ others. Show all posts
Showing posts with label ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ others. Show all posts

Friday, 27 December 2019

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ others

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ
ತನು ನಿಲ್ಲದಯ್ಯ ದಾತನು ಎಣಿಸಯ್ಯ|

ಹಣ ಪುಟ್ಟುವುದು ಸುಗುಣ ಪುಟ್ಟದಯ್ಯ
ಗುಣನಿಧಿ ಹರಿಯ ನೀನೆಣಿಸಿ ಬಾಳಯ್ಯಾ||

ಜನರು ಬರುವರು ಸಜ್ಜನ ಬಾರರಯ್ಯ
ಅನುಸರಿಸುತ ಜೀವನ ಪೊರೆಯಯ್ಯ||

ಭಾಗ್ಯನಿಧಿ ವಿಠಲನ ಆಜ್ಞೆ ಇದಯ್ಯ
ಸುಜನರ ಸೇವಿಸಿ ಯೋಗ್ಯನೆಂದಿನಿಸಯ್ಯಾ||
*******