Audio by Vidwan Sumukh Moudgalya
ಶ್ರೀ ಗುರುಜಗನ್ನಾಥದಾಸರ ರಚನೆ
ರಾಗ : ಕಾಂಬೋಧಿ ತಾಳ : ಖಂಡಛಾಪು
ಶ್ರೀ ವಿರುಪಾಕ್ಷ ಸಂರಕ್ಷಿಸೆಮ್ಮ
ಕೋವಿದಜನ ಪ್ರಿಯ ಭಾವಜ್ಞರೊಳಗಿಟ್ಟು ॥ಪ॥
ಮಾತಂಗ ಷಣ್ಮುಖರತಾತ ಸಂತತ ಎನ್ನ -
ಮಾತನಾಲಿಸು ಗಿರೀಶ ವೀತಶೋಕ
ಮಾತರೀಶ್ವನ ಸುತನೆ ಪ್ರೀತಿಯಲಿ ಸಲಹು ಪುರ-
ಹೂತ ಮುಖ ವಂದಿತ ಸುರೇತರಾಂತಕ ಶಂಭೋ ॥೧॥
ಸೋಮ ಶಿವ ಶರ್ವಭವ ವ್ಯೋಮಕೇಶನೆ ಮನದ
ಆಮಯವ ಪರಿಹರಿಸೊ ವಾಮದೇವಾ
ಕಾಮಹರ ಮನ್ಮನದ ಕಾಮಿತಾರ್ಥಗಳಿತ್ತು
ಈ ಮಹಿಯೊಳಗೆ ಬಿಡದೆ ಪ್ರೇಮದಿಂದಲಿ ಪೊರಿಯೊ ॥೨॥
ಅನಾಥಬಂಧುವೆ ಪ್ರಪನ್ನ ಪರಿಪಾಲಕನೆ
ಮನ್ನಿಸಿ ಸಲಹೋ ವೇಗ ಮಾನ್ಯನೆನಿಸಿ
ಸನ್ನುತ ಮಹಿಮ ಗುರುಜಗನ್ನಾಥವಿಟ್ಠಲಗೆ
ಉನ್ನತ ಪ್ರಿಯನೆಂದು ಬಿನ್ನೈಸುವೆನೊ ನಿನಗೆ ॥೩॥
******