..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ವಿಘ್ನೇಶ ಪಾಹಿಮಾಂ
ವಿಘ್ನ ನಿವಾರಕ ನಿರ್ವಿಘ್ನದಾಯಕ ಪ
ಭಗ್ನದಂತಾಕಾಶಾಭಿಮಾನಿ
ಮಗ್ನಂ ಕೃತ್ವಾವೋ ಮನ
ಅಗ್ನಿ ನೇತ್ರಸುತ ತವ ಪದದೆ ಅ.ಪ
ಕುಕ್ಷಿ ಮಹಾಲಂಬೋದರ ಇಕ್ಷುಚಾಪಹರ
ಅಕ್ಷತ ಶೋಭಿತ ಗಜಪಾಲ
ರಾಕ್ಷಸ ಮದಹರ ಅಂಕುಶಪಾಶ
ಯಕ್ಷ ಕಿನ್ನರ ವಂದಿತ ಚರಣ 1
ಗಜಾನನ ಮನೋಹರ ಗಾತ್ರ
ಅಜಿನ ಬದ್ಧ ಪ್ರಲಂಬ ಪವಿತ್ರ
ಭಜಕೇಷ್ಟದ ಪರಮ ಸೂತ್ರ
ಸುಜನ ಪಾಪ ಪರ್ವತ ವೀತಿ ಹೋತ್ರ 2
ಚತುರ್ಹಸ್ತ ಮೂಷಕ ಗಮನ
ವಾಯಭುಗ್ ಭೂಷ ಆದಿಪೂಜ್ಯ
ವಿತತ ಮಹಿಮ ಏಕದಂತ ಗಂಧಲೇಪಿತ ವಕ್ಷ
ಪತಿತ ಪಾವನ ವಿಶ್ವೋಪಾಸ್ಯ 3
ವ್ಯಾಸೋಕ್ತ ಪುರಾಣ ಲಿಖಿತನೆ ಶೂರ
ವಿಂಶತ್ಸೇಕ ಮೋದಕ ಭಕ್ಷ
ವಾಸುಕಿ ಬದ್ಧ ಕಟಿ ವಿರಾಜಿತ ಕ್ಲೇಶನಾಶನ ಸುಂದರ
ಆಶಾಪಾಶ ರಹಿತ ಭೂತ ಗಣೇಶ 4
ಹಾಟಕ ಮಣಿಮಯ ಮಕುಟ
ತಟಿತ್ತೇಜ ನಿತ್ಯವಹಿರೂಪ
ಪಟಪಟ ಶಬ್ದಘಟಿತ ಗಜಕರ್ಣ
ನಿಟಿಲಾಕ್ಷ್ಯವಂದ್ಯ ವಿಜಯರಾಮಚಂದ್ರ
ವಿಠಲ ಪೂಜಕ ಶತಸ್ಥ 5
***