Showing posts with label ಕಂಡೆ ಕಂಗಳಲೆನ್ನ ಮಂಗಳಾತ್ಮನ mahipati. Show all posts
Showing posts with label ಕಂಡೆ ಕಂಗಳಲೆನ್ನ ಮಂಗಳಾತ್ಮನ mahipati. Show all posts

Thursday, 12 December 2019

ಕಂಡೆ ಕಂಗಳಲೆನ್ನ ಮಂಗಳಾತ್ಮನ ankita mahipati

ಮಾಂಡ್ ರಾಗ ಕೇರವಾ ತಾಳ

ಕಂಡೆ ಕಂಗಳಲೆನ್ನ ಮಂಗಳಾತ್ಮನ
ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ||

ಬಾಲಲೀಲೆ ತೋರಿದ ನೀಲವರ್ಣನ ಕಂಡೆ
ಪಾಲಗಡಲಲಿಹ ಗೋಪಾಲನ ಕಂಡೆ
ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ
ಕುಲಕೋಟಿ ಬಂಧುವಾದ ಬಳಗನ ಕಂಡೆ ||೧||

ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ
ಥಳಥಳಿಸುವ ಪದ ಹೊಳೆವನ ಕಂಡೆ
ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ
ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨|

ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ
ಪರಿಪರಿಭೂಷಣ ಸರ್ವಾಂಗನ ಕಂಡೆ
ಗರುಡವಾಹನ ಸ್ವಾಮಿ ಉರಗಶಯನನ ಕಂಡೆ
ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩||

ವಿದುರವಂದಿತ ದೇವ ಮದನಮೋಹನ ಕಂಡೆ
ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ
ಯದುಕುಲೋತ್ತಮ ಮಧುಸೂದನನ ಕಂಡೆ
ಆದಿ ಅವಿನಾಶ ಶ್ರೀಧರನ ಕಂಡೆ ||೪||

ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ
ಮುರಹರನೆನಿಸಿದ ಸುರಾಧೀಶನ ಕಂಡೆ
ಕರಿಯ ವರದಾಯಕ ಹರಿ ದಯಾಳುವ ಕಂಡೆ
ನರಹರಿಯು ಶ್ರೀನಾರಾಯಣನ ಕಂಡೆ ||೫||

ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ
ಶಿಷ್ಟಜನಪಾಲಕ ಶ್ರೀಸೃಷ್ಟೀಶನ ಕಂಡೆ
ದೃಷ್ಟಿಯೊಳು ಸುಳಿದು ದೃಷ್ಟಾಂತದವನ ಕಂಡೆ
ಕಷ್ಟ ಪರಿಹರಿಪ ಶ್ರೀ ಕೃಷ್ಣನ ಕಂಡೆ ||೬||

ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ
ಪರಮಭಕ್ತರ ಸಂಜೀವನ ಕಂಡೆ
ಶರಣರಕ್ಷಕ ನಮ್ಮ ಕರುಣಸಿಂಧುನ ಕಂಡೆ
ತರಳ ಮಹಿಪತಿ ಪ್ರಾಣಹೊರೆವನ ಕಂಡೆ ||೭||
***

ಕಾಖಂಡಕಿ ಶ್ರೀ ಮಹಿಪತಿರಾಯರು

ಕಂಡೆ ಕಂಗಳಲೆನ್ನ ಮಂಗಳಾತ್ಮನ ಕಂಡೆ ಕಂಡೆ ಮಂಗಳಾಂಗ ಶ್ರೀ ಗುರುರಂಗನ ಕಂಡೆ p


ಬಾಲ ಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ್ಯ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ 1 

ಮೂರ್ತಿ ನಳಿನನಾಭವ ಕಂಡೆ ಪಾದ ಹೊಳೆವನ ಕಂಡೆ ಕಳ್ಳ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ 2 

ಕಿರೀಟ ಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿ ಭೂಷಣ ಸರ್ವಾಂಗನ ಕಂಡೆ ವಾಹನ ಸ್ವಾಮಿ ಉರಗಶಯನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ 3 

ಮದನ ಮೋಹನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಸಾಧು ಹೃದಯ ಪ್ರಾಣ ಶ್ರೀಮಾಧವನ ಕಂಡೆ 4 

ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ ಮುರಹರನೆನಿಸಿದ ಸುರಾಧೀಶನ ಕಂಡೆ ಕರಿಯ ವರದಾಯಕ ಹರಿ ದಯಾಳುನ ಕಂಡೆ ನರಹರಿ ಶ್ರೀನಾರಾಯಣನ ಕಂಡೆ 5 

ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ ಶಿಷ್ಟ ಜನ ಪಾಲಕ ಸೃಷ್ಟೀಶನ ಕಂಡೆ ದೃಷ್ಟಿಯೊಳು ಸುಳಿದು ದೃಷ್ಟಾಂತಾದವನ ಕಂಡೆ ಕಷ್ಟ ಪರಿಹರಿವ ಶ್ರೀಕೃಷ್ಣನ ಕಂಡೆ 6 

ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ ಪರಮಭಕ್ತರ ಸಂಜೀವನ ಕಂಡೆ ಶರಣ ರಕ್ಷಕ ನಮ್ಮ ಕರುಣ ಸಿಂಧುನ ಕಂಡೆ ತರಳ ಮಹಿಪತಿ ಪ್ರಾಣಹೊರೆವ ಕಂಡೆ 7

***