Showing posts with label ಗುರುರಾಘವೇಂದ್ರರ ಚರಣ ಕಮಲವನ್ನು gopala vittala GURU RAGHAVENDRARA CHARANA KAMALAVANNU. Show all posts
Showing posts with label ಗುರುರಾಘವೇಂದ್ರರ ಚರಣ ಕಮಲವನ್ನು gopala vittala GURU RAGHAVENDRARA CHARANA KAMALAVANNU. Show all posts

Thursday, 5 December 2019

ಗುರುರಾಘವೇಂದ್ರರ ಚರಣ ಕಮಲವನ್ನು gopala vittala GURU RAGHAVENDRARA CHARANA KAMALAVANNU


ರಾಗ ಮೋಹನ         ಖಂಡಛಾಪುತಾಳ 

1st Audio by Mrs. Nandini Sripad



RAGA ANANDABHAIRAVI


ಗುರುರಾಘವೇಂದ್ರರ ಚರಣ ಕಮಲವನ್ನು ।
ಸ್ಮರಿಸುವ ಸುಜನರಿಗೆ ॥ ಪ ॥
ಕರೆಕರೆಗೊಳಿಸುವ ದುರಿತ ರಾಶಿಗಳೆಲ್ಲ ।
ಕರಿಯು ಸಿಂಹನ ಕಂಡ ತೆರನೆಂತಾಹೋದಯ್ಯ ॥ ಅ ಪ ॥

ಗುರು ಮಧ್ವಮತವೆಂಬೊ ವರಕ್ಷೀರ ಶರಧಿಲಿ ।
ಪರಮ ಶೋಭಿತ ಶಶಿಯಂತುದಿಶಿ ॥
ಪರಮತ ತಿಮಿರಕ್ಕೆ ತರಣಿ ಕಿರಣನಾಗಿ ।
ಧುರದಿ ಮೆರೆವ ಸಿರಿರಾಮನರ್ಚಕರಾದ ॥ 1 ॥

ಹರಿಯೆ ಸರ್ವೋತ್ತುಮ ಸಿರಿಯೆ ಆತನ ರಾಣಿ ।
ಪರಮೇಷ್ಠಿ ಮರುತರೆ ಗುರುಗಳೆಂದು ॥
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ ।
ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ ॥ 2 ॥

ರಾ ಯೆನ್ನೆ ರಾಶಿ ದೋಷಗಳ ದಹಿಸುವದು ।
ಘ ಯೆನ್ನೆ ಘನ ಜ್ಞಾನ ಭಕುತಿಯನಿತ್ತು ॥
ವೇಂ ಯೆನ್ನೆ ವೇಗಾದಿ ಜನನ ಮರಣ ಗೆದ್ದು ।
ದ್ರಾ ಯೆನ್ನೆ ದ್ರವಿಣೋದ ಶೃತಿಗೇವೆ ಘನಕಾಂಬ ॥ 3 ॥

ಅಂಧಕರಿಗೆ ಅಕ್ಷಿ ವಂದ್ಯರಿಗೆ ಸುತರು ।
ಬಂದ ಬಂದವರಭೀಷ್ಟಗಳನಿತ್ತು ॥
ಒಂದಾರುನೂರು ವತ್ಸರ ವೃಂದಾವನದಲ್ಲಿ । 
ನಿಂದು ಮೆರೆವ ಕೃಪಾಸಿಂಧು ದೇವಾಂಶರ ॥ 4 ॥

ವರತುಂಗಾತೀರ ಮಂತ್ರಾಲಯಪುರದಲ್ಲಿ ।
ಪರಿ ಪರಿ ಪೂಜಿ ಭೂಸುರರಿಂದ ಕೊಳುತ ॥
ಶಿರಿಯರಮಣ ನಮ್ಮ ಗೋಪಾಲವಿಠಲನ್ನ 
ಚರಣ ಸೇವಿಸುತಿಹ ಗುರು ಶಿಖಾಮಣಿಯಾದ ॥ 5 ॥
***




***


ಗುರು ರಾಘವೇಂದ್ರರ ಚರಣ ಕಮಲವನ್ನು 
ಸ್ಮರಿಸುವ ಮನುಜರಿಗೆ ।। ಪ ।।

ಕರೆ ಕರೆಗೊಳಿಸುವ ದುರಿತ ದುಷ್ಕೃತ್ಯ । 
ಕರಿಯು ಸಿಂಹನ ಕಂಡ ತೆರನಾಗುವುದು ।। ಅ.ಪ ।।

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ ।
ಪರಮೇಷ್ಠಿ ಮರುತರೆ ಗುರುಗಳೆಂದು ।।
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ ।
ಸ್ಥಿರತರ ತಮ ಪಂಚ ಬೇಧ ಸತ್ಯವೆಂಬ ।। ೧ ।।

"ರಾ" ಎನ್ನೆ ರಾಶಿದೋಷಗಳನೆ ದಹಿಸುವ ।
"ಘ" ಎನ್ನೆ ಘನಜ್ಞಾನಭಕುತಿಯೀವ ।।
"ವೇಂ" ಎನ್ನೆ ವೇಗದಿ ಜನನ ಮರಣ ದೂರ ।
"ದ್ರ" ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ ।। ೨ ।।

ದೇವಾಂಶರಾಗಿ ತುಂಗಾತೀರದಿ ನಿಂತು ।
ಸೇವೆ ಭೂಸುರರಿಂದ ಬಹುಗೊಳ್ಳುತ ।।
ಭಾವಜನಯ್ಯ ಗೋಪಾಲವಿಠ್ಠಲನ್ನ ।
ಸೇವಿಸುತಿಹ ಯತಿಕುಲ ಶಿಖಾಮಣಿಯ ।। ೩ ।
****

ಗುರುರಾಘವೇಂದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ            |                          | ಪ ||
ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ
ಕರಿಯು ಸಿ೦ಹನ ಕ೦ಡ ತೆರನಾಗುವುದಯ್ಯ                 | ಅ ||

ಗುರುಮಧ್ವಮತವೆ೦ಬ ವರಕ್ಷೀರಾ೦ಬುಧಿಯಲ್ಲಿ
ಹರಧರಿಸಿದ ಶಶಿಯ೦ತುದಿಸಿ
ಪರಮತತಿಮಿರಕ್ಕೆ ತರಣಿ ಕಿರಣವೆನಿಸಿ
ಪಿರಿದು ಮೆರೆದ ಸೀತಾರಾಮಾರ್ಚಕರಾದ        || ೧ ||

ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆ೦ದು
ಗರುಡ ಶೇಷ ರುದ್ರ ಸಮರೆ೦ದು ಸ್ಥಾಪಿಸಿ
ಸ್ಥಿರತರತಮ ಪ೦ಚಭೇದ ಸತ್ಯವೆ೦ಬ              || ೨ ||

ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ
ಘಯೆನ್ನೆ ಘನಜ್ಞಾನ ಭಕ್ತಿಯೀವಾ
ವೇ೦ ಎನೆ ವೇಗದಿ ಜನನ ಮರಣ ದೂರ
ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾ೦ಬ        || ೩ ||

ಅ೦ಧಕರಿಗೆ ಚಕ್ಷು ವ೦ಧ್ಯೆಯರಿಗೆ ಸುತರು
ಬ೦ದಬ೦ದವರಿಗಭೀಷ್ಟವ ಕೊಡುತ
ಒ೦ದಾರುನೂರು ವತ್ಸರ ಬೃ೦ದಾವನದಲಿ
ಚ೦ದಾಗಿ ನಿ೦ದು ಮೆರೆವ ಕೃಪಾಸಿ೦ಧು               || ೪ ||

ದೇವಾ೦ಶರಾಗಿ ತು೦ಗಾತೀರದಿ ನಿ೦ದು
ಸೇವೆ ಭೂಸುರರಿ೦ದ ಬಹುಕೊಳ್ಳುತ
ಭಾವಜನಯ್ಯ ಗೋಪಾಲವಿಠ್ಠಲನ್ನ
ಸೇವಿಸುತಿಹ ಯತಿಕುಲಶಿಖಾಮಣಿಯಾದ   
****

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ |

ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ |

ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ |
ಪರಮತ ತಿಮಿರಕ್ಕೆ ತರಣಿಕಿರಣನೆನೆಸಿ ಪಿರಿದುಮೆರೆವ ಸಿರಿರಾಮನರ್ಚಕರಾದ | ೧ |

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ | ಪರಮೇಷ್ಟಿ ಮರುತರೆ ಗುರುಗಳೆಂದು |
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ | ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ | ೨ |

ಅಂಧಕಗೆ ಚಕ್ಷು ವಂದ್ಯರಿಗೆ ಸುರತರು | ಬಂದಬಂದವರಭೀಷ್ಟಗಳನಿತ್ತು |
ಒಂದಾರುನೂರುವತ್ಸರ ವೃಂದಾವನದಲ್ಲಿ | ಚೆಂದಾಗಿ ನಿಂದು ಮೆರೆವ ಕೃಪಾಸಿಂಧು |೩ |

ರಾ ಎನ್ನೆ ದುರಿತರಾಶಿಗಳ ದಹಿಸುವ | ಘ ಎನ್ನೆ ಘನಜ್ಞಾನ ಭಕುತಿ ಈವ |
ವೇಂ ಎನ್ನೆ ವೇಗದಿ ಜನನಮರಣ ದೂರ | ದ್ರ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ | ೪ |

ವರ ತುಂಗಾತೀರ ಮಂತ್ರಾಲಯ ಪುರದಲ್ಲಿ | ಪರಿಪರಿ ಸೇವೆ ಭೂಸುರರಿಂದ ಕೊಳುತ |
ಸಿರಿಯರಮಣ ನಮ್ಮ ಗೋಪಾಲವಿಟ್ಠಲನ | ಚರಣ ಸೇವಿಸುತಿಪ್ಪ ಗುರುಶಿಖಾಮಣಿಯಾದ | ೫
****

ರಾಗ - ಧನ್ಯಾಶ್ರೀ : ತಾಳ - ಏಕತಾಳ(raga tala may differ in audio)