ankita ನಾಗಶಯನವಿಠಲ
ರಾಗ: ಬೆಹಾಗ್ ತಾಳ: ಅಟ
ಪಾಲಯ ಮಾಂ ಮಂತ್ರಾಲಯ ಪ್ರಭುವೆ ಪ
ಪಾಲಯ ಮಾಂ ನತಜನ ಪಾಲಕ ಗುರುವೆ ಅ. ಪ
ಜ್ಞಾನ ಭಕುತಿ ವೈರಾಗ್ಯವೆಂಬ ನಿಜ
ಧನವ ಪಾಲಿಸಿ ಅನುಸಂಧಾನವ ಬಲಿಸೆಂದೆ
ದಾನಿಗಳರರಸೆ ನಿಧಾನಿಸದಲೆ ತ್ವ-
ತ್ಪಾದ ಸಂದರ್ಶನ ಸಲಿಸಿಂದೆ 1
ಗುರು ಕರುಣದಿ ಮನ ಕರಗಿತು ಹರಿಪರ
ಗುರುಕರಾರ್ಚಿತ ಇದ ಸ್ಥಿರಪಡಿಸೆನ್ನ
ಪರಿಭವಣೆಯ ಸಂಹರಣಗೈಸಿ ಹರಿ
ಶರಣರೊಳಿಡು ಇಹ ಪರದೊಳಗಿನ್ನ 2
ಸ್ವಚ್ಛ ಭಕುತಿ ಸಂಪ್ರೋಚ್ಛದಿ ಅಚ್ಯುತ
ಉಚ್ಛ ನಾಗಶಯನ(ವಿಠಲ)ನ ತೋರೆಂದೆ
ನಿಚ್ಛಣಿಯಂದದೊಳ್ ಇಪ್ಪ ನಿನ್ನ ನಾ
ನೆಚ್ಚಿ ಬೇಡಿದ ಎನ್ನೀ ಈಪ್ಸಿತ ಸಲಿಸೋ 3
***