..
ಕವಿವರರ ಕವನದಲಿ ಕವಿ ಕವಿದು ಪೊಳೆವ
ಭುವನಪಾವನ ಚರಿತ ಇಂದೀವರಾಕ್ಷ ಪ
ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ
ನವನವದಿ ತೋರಿದೆಯೊ ಮೋದ ಕರಿವರದ
ಭವಭಂಗ ಪರಿಹಾರ ಕವನ ವೋದಿದ ಮಾತ್ರ
ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1
ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು
ಲವಲವಿಕೆ ಎಮ್ಮ ಚೇತನಕೆ ಕೊಟ್ಟು
ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ
ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2
ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು
ಶಿವ ಶುಕ ಪಿತ ಸವಿದ ರುಚಿಯು ಇಹುದು
ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ |
ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3
ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ
ಭವಮೂಲಕುನ್ಮೂಲ ಇದರ ಮಹಿವi
ಅವಲಿಯನು ತಿಂದವನು ಅಗಲಿರದೆ ಒಡನಿಹನು
ಜವನ ದೂತರು ತಲೆಮಣಿದು ಓಡುವರೊ 4
ತತ್ವಾಭಿಮಾನಿಗಳಿಗಾಹಾರವಿದು ಸತ್ಯ
ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ
ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ
ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5
***