ರಾಗ ಮುಖಾರಿ. ಝಂಪೆ ತಾಳ
ಎಲೊ ಎಲೊ ಜೀವಾತ್ಮ ನೀ
ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ||
ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ
ಅಕ್ಷಯ ಪಾತ್ರೆಯಿರಲು ಹಸಿದು ಇರಲೇಕೆ
ನಿಕ್ಷೇಪ ನಿಧಿಯಿರಲು ನಿರತ ದಾರಿದ್ರವೇಕೆ
ಪಕ್ಷಿವಾಹನನನಿರಲು ಪರದೈವವೇಕೆ ||
ಸುರಧೇನು ಕೈಸೇರಿ ಸುಖವಿಲ್ಲದಿರಲೇಕೆ
ಗರುಡಮಂತ್ರವ ಜಪಿಸೆ ಗರಳಭಯವೇಕೆ
ತರಣಿ ಮೊದಲುದಯಿಸಲು ಹಲವು ಜ್ಯೋತಿಗಳೇಕೆ
ಮುರಹರನ ಪೂಜಿಸದೆ ಮುಂದೆಗೆಡಲೇಕೆ ||
ಭಾವಶುದ್ಧಿ ಇಲ್ಲದಿಹ ಬಯಲ ಡಂಭಕವೇಕೆ
ದೇವತಾಂಕಿತವಿರದ ದೇಹ ತಾನೇಕೆ
ಆವಾಗ ಹರಿಯಿರಲು ಅನ್ಯ ಚಿಂತೆಗಳೇಕೆ
ಪುರಂದರವಿಠಲನ ಭಜಿಸದೆ ಕೆಡಲೇಕೆ ||
***
ಎಲೊ ಎಲೊ ಜೀವಾತ್ಮ ನೀ
ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ||
ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ
ಅಕ್ಷಯ ಪಾತ್ರೆಯಿರಲು ಹಸಿದು ಇರಲೇಕೆ
ನಿಕ್ಷೇಪ ನಿಧಿಯಿರಲು ನಿರತ ದಾರಿದ್ರವೇಕೆ
ಪಕ್ಷಿವಾಹನನನಿರಲು ಪರದೈವವೇಕೆ ||
ಸುರಧೇನು ಕೈಸೇರಿ ಸುಖವಿಲ್ಲದಿರಲೇಕೆ
ಗರುಡಮಂತ್ರವ ಜಪಿಸೆ ಗರಳಭಯವೇಕೆ
ತರಣಿ ಮೊದಲುದಯಿಸಲು ಹಲವು ಜ್ಯೋತಿಗಳೇಕೆ
ಮುರಹರನ ಪೂಜಿಸದೆ ಮುಂದೆಗೆಡಲೇಕೆ ||
ಭಾವಶುದ್ಧಿ ಇಲ್ಲದಿಹ ಬಯಲ ಡಂಭಕವೇಕೆ
ದೇವತಾಂಕಿತವಿರದ ದೇಹ ತಾನೇಕೆ
ಆವಾಗ ಹರಿಯಿರಲು ಅನ್ಯ ಚಿಂತೆಗಳೇಕೆ
ಪುರಂದರವಿಠಲನ ಭಜಿಸದೆ ಕೆಡಲೇಕೆ ||
***
pallavi
elo elo jIvAtma nI sulalitAtmana nenedu sukhiyAko manave
caraNam 1
ikSudaNDa kaiyoLire inthanava melalEke akSaya pAtreyiralu hasidu iralEke
nikSEpa nidhiyiralu nirata dAridravEke pakSi vAhanananiralu para daivavEke
caraNam 2
suradhEnu kaisEri sukhavilladiravEke garuDa mantrava japise garaLa bhayavEke
daraNi modaludayisalu halavu jyOtigaLEke muraharana pUjisade munde geDalEke
caraNam 3
bhAvasuddhi illadiha bayala DambhavEke dEvatAngita virata dEha tnEke
AvAga hariyiralu anya cintegaLEke purandara viTTalana bhajisade keDalEke
***