Showing posts with label ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು ಪರರಿಗೊಪ್ಪಿಸಿ ಹೀಗೆ lakshmikanta. Show all posts
Showing posts with label ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು ಪರರಿಗೊಪ್ಪಿಸಿ ಹೀಗೆ lakshmikanta. Show all posts

Sunday, 1 August 2021

ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು ಪರರಿಗೊಪ್ಪಿಸಿ ಹೀಗೆ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು

ಪರರಿಗೊಪ್ಪಿಸಿ ಹೀಗೆ ಪ


ಪರಮ ದಯಾನಿಧಿ ಅಲ್ಲವೆ ಮುನ್ನ

ಶರಣರ ಪಾಲಿಸಲಿಲ್ಲವೆ ಇದು

ಸರಿಯೇನೊ ಜನ ನಗರೇನೊ ಇನ್ನು

ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ.

ಗತಿಹೀನರಿಗೆ ನೀ ಗತಿಯೆಂದು | ನೀನೆ

ಪತಿತರ ಪತಿಕರಿಸುವನೆಂದು

ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ

ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1


ದೋಷರಾಶಿಗಳೆಲ್ಲ ಅಳಿಸಯ್ಯ

ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ

ದಾಸಾನುದಾಸ ದಾಸನು ಎನಿಸಿ | ಪರಿ-

ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2


ಏನು ಸಾಧನವನ್ನು ನಾ ಕಾಣೆ | ನಿನ್ನಾ-

ಧೀನದವನು ನಾ ನಿನ್ನಾಣೆ

ದೀನ ಬಂಧುವೆ ದಯಾಸಿಂಧುವೆ

ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3

***