ರಾಗ : ಮೋಹನ ತಾಳ : ಆದಿ
ಬಂದೂ ನೋಡಿದೆ
ಯತಿಯಾ ಯನ್ನ । ನೂ ।
ರೊಂದು ಕುಲವ
ಗತಿಯಾ ಕೊಡುವಾ ।
ನಂದದಿಂದಲಿ ಸ್ತುತಿಯಾ
ಮಾಡಾಲೂ ।
ಪೊಂದಿಸುವನು
ಮತಿಯಾ ।। ಪಲ್ಲವಿ ।।
ಮುನಿಕುಲೋತ್ತಮನಾ
ಉತ್ತಮಾ ।
ಮನುಜರ ಮನೋಹರನಾ ।
ಅನಿಮಿತ್ತ ಬಾಂಧವನಾ
ಶುಭಕಾಯ ।
ದಿನಕರ ತೇಜನನಾ ।। ಚರಣ ।।
ಪರವಾದಿಗಳ ಭಂಗನಾ ತನ್ನನ್ನು ।
ಅರಿದವರಿಗೊಲಿದವನಾ ।
ಕರೆದವರಿಗೆ ವರನಾ ಸುರಿದೂ ।
ಪೊರೆವ ಕರುಣಾ-
ಪಾಂಗಾನಾ ।। ಚರಣ ।।
ಮಂಡಲದೊಳು ದಿಟ್ಟ ದ್ವಾದಶ ।
ಪುಂಡ್ರವ ರಚಿಸಿದನಾ ।
ದಂಡಕಾಷ್ಠವ ಧರನಾ ।
ಕಂಡೆ ಕಮಂಡಲ
ಉಳ್ಳ ಕರನಾ ।। ಚರಣ ।।
ಕಾಷಾಯಾಂಬರ
ಧರನಾ ನಿರುತಾ ।
ವ್ಯಾಸರಾಮರ ಪೂಜನಾ ।
ಸಾಸಿರ ಗುಣಗಣನಾ । ವೇದದ ।
ಘೋಷಣೆ ಲಾಲಿಪನಾ ।। ಚರಣ ।।
ವಾಯು ಮತ ಸಿದ್ಧನಾ । ಮಧ್ವ ।
ರಾಯರ ಪ್ರತಿಬಿಂಬನಾ ।
ಕಾಯುವ ಯಲ್ಲರನಾ ನಮ್ಮ । ವಿ ।
ಜಯ ವಿಠಲ ದಾಸನಾ ।। ಚರಣ ।।
****
Padmanabha teertha stutih
ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರು....
ಮೇಲ್ಕಂಡ ಪಾದದಲ್ಲಿ ಶ್ರೀ ವಿಜಯರಾಯರು ಶ್ರೀ ಪದ್ಮಾನಾಭತೀರ್ಥರನ್ನು ಶ್ರೀ ಮಧ್ವರಾಯರ ಪ್ರತಿಬಿಂಬಯೆಂದು ಸೂಚಿಸಿ - ಶ್ರೀ ಶೇಷದೇವರ ಅವತಾರವೆಂದು ಖಚಿತ ಪಡಿಸಿದ್ದಾರೆ.
****