Showing posts with label ಮುಕ್ತಿ ದೊರಕಿತು ಗುರುಕೃಪೆಯಿಂದಲಿ jnanabodha. Show all posts
Showing posts with label ಮುಕ್ತಿ ದೊರಕಿತು ಗುರುಕೃಪೆಯಿಂದಲಿ jnanabodha. Show all posts

Thursday, 5 August 2021

ಮುಕ್ತಿ ದೊರಕಿತು ಗುರುಕೃಪೆಯಿಂದಲಿ ankita jnanabodha

 ..

ಮುಕ್ತಿ ದೊರಕಿತು ಗುರುಕೃಪೆಯಿಂದಲಿ ಪ


ಒಮ್ಮನದಿಂದಲಿ ವಿವರಿಸಿ ನೋಡಲುಕರ್ಮ ಬ್ರಹ್ಮಾಗಿ ತೋರಿತಕ್ಕ |ಅಮ್ಮಾ ಅಮ್ಮಾ ಈ ಮಾತು ಏನಂತ ಹೇಳಲಿನಿರ್ಮಳ ನಿಜ ವಸ್ತು ಕಾಣ ಬಂತಕ್ಕ 1

ಮಾತು ಮಾತಿನಲಿ ಸಪ್ತಧಾತುವಿನಲಿಮತ್ತೊಂದು ತೋರಿದ ಭುವನದಲಿ |ಎತ್ತ ನೋಡಿದರತ್ತ ವಸ್ತುವೇ ಪರಿಪೂರ್ಣವಿಚಾರದಿಂದಲಿ ಅನುಭವದಿಂದಲಿ2

ಇಂದು ಜ್ಞಾನಬೋಧಗೆ ಆನಂದವಾಯಿತುಸಂದೇಹ ಹೋಯಿತು ಮನಸಿನಲಿ |ಎಂದಿಗೂ ಅಳಿಯದ ಸೌಭಾಗ್ಯ ದೊರಕಿತುತಂದೆ ಗೋವಿಂದನ ವಾಕ್ಯದಲಿ 3

***