Showing posts with label ಉಮಾ ಕಾತ್ಯಾಯನಿ abhinavapranesha vittala suladi ಪಾರ್ವತಿ ದೇವಿ ಸ್ತೋತ್ರ ಸುಳಾದಿ UMA KAATYAAYINI PARVATI DEVI STOTRA SULADI. Show all posts
Showing posts with label ಉಮಾ ಕಾತ್ಯಾಯನಿ abhinavapranesha vittala suladi ಪಾರ್ವತಿ ದೇವಿ ಸ್ತೋತ್ರ ಸುಳಾದಿ UMA KAATYAAYINI PARVATI DEVI STOTRA SULADI. Show all posts

Sunday, 8 December 2019

ಉಮಾ ಕಾತ್ಯಾಯನಿ abhinavapranesha vittala suladi ಪಾರ್ವತಿ ದೇವಿ ಸ್ತೋತ್ರ ಸುಳಾದಿ UMA KAATYAAYINI PARVATI DEVI STOTRA SULADI


Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶದಾಸಾರ್ಯ ವಿರಚಿತ ಪಾರ್ವತೀದೇವಿ ಸ್ತೋತ್ರ ಸುಳಾದಿ 

ರಾಗ ವಲಚಿ 

ಧ್ರುವತಾಳ 

ಉಮಾ ಕಾತ್ಯಾಯಿನಿ ಪಾರ್ವತಿ ಕಲ್ಯಾಣಿ 
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ 
ಕಮ್ಮಗೋಲನ ಜನನಿ ದಾಕ್ಷಾಯಣಿ 
ಸುಮನಸರಿಗೆ ಗತಿ ಕರುಣಾಪೂರಿತ ಪಾಂಗೆ
ಕುಮನಸರಿಗತಿ ವಜ್ರಕಠಿಣಪಾಂಗೆ 
ರಮೆಯರಸನ ಪಾದ ಸುಮನಸ್ವಭೃಂಗೆ 
 ಬೊಮ್ಮನಭಿನವ ಪ್ರಾಣೇಶವಿಠಲನ 
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ ॥ 1 ॥

ಮಟ್ಟತಾಳ 

ಚಂಡಿದುರ್ಗೆ ಭೂತಗಣ ಸಂಸೇವಿತಳೆ
ರುಂಡಾಹಿಮಾಲಾಧರ ಹೃನ್ಮಂದಿರಳೆ 
ಉಂಡು ವಿಷವ ನಿನ್ನ ಗಂಡನು ಬಳಲಿ 
ಕೈಕೊಂಡೌಷಿಧವೆನಗೆ ಕರುಣದಿ ನೀಡಮ್ಮ 
ಮಂಡೆ ಬಾಗಿ ಬೇಡ್ವೆ ಕರಗಳ ಜೋಡಿಸುತ 
ಪುಂಡರೀಕ ನಯನೆ ಪುಂಡರೀಕ ಗಮನೆ 
ಪಂಢರ ಅಭಿನವ ಪ್ರಾಣೇಶವಿಠಲನ 
ಪುಂಡಲೀಕ ಚರಣ ಬಂಡುಣಿ ಎನಿಸಮ್ಮಾ ॥ 2 ॥

ತ್ರಿವಿಡಿತಾಳ 

ಆರುಮೊಗನ ಪೆತ್ತ ಚಾರು ಚರಿತ್ರಳೆ
ವಾರಣಾರಿ ವೃಷಭ ಶ್ಯಂದನಳೆ 
ಶ್ರೀರಜಪತಿ ರಾಮನಾಮ ಮಂತ್ರವ ಜಪಿಸಿ
ಸರ್ವಮಂಗಳೆಯಾದ ಶರ್ವಾಣಿಯೆ 
ನಾರಿಯರಾಭಿಷ್ಟ ಪೂರೈಸುತವರಿಗೆ 
ವೀರಪತಿವ್ರತಧರ್ಮ ಮರ್ಮವ ತೋರ್ದ 
ವಾರಿಜನಯನೆ ಮಂಗಳ ಗೌರಿಯೇ 
 ಮಾರಮಣಭಿನವ ಪ್ರಾಣೇಶವಿಠಲನ 
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ ॥ 3 ॥

ಅಟ್ಟತಾಳ 

ಹರಿಸರ್ವೋತ್ತುಮನೆಂಬ ಸ್ಥಿರವಾದ ಜ್ಞಾನವ 
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ 
ದುರುಳ ದಾನವರಂತೆ ಪರಮೇಶ ಶಿವನೆಂದು 
ಪೆರಧರ ಪರನೆಂದು ನುಡಿಸದಿರೆಂದೆಂದು 
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು 
ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ 
ಸಿರಿವರ ಅಭಿನವ ಪ್ರಾಣೇಶವಿಠಲನ 
ಚರಣವಾರಿಜ ಭೃಂಗೆ ದೀನ ದಯಪಾಂಗೆ ॥ 4 ॥

ಆದಿತಾಳ 

ಭಾಸುರ ಚರಿತಳೆ ಭೂಸುರ ವಿನುತಳೆ 
ಸಾಸಿರ ನಾಮನ ತೋಷದಿ ಭಜಿಪಳೆ 
ವಾಸವಾದಿ ದಿವಿಜೇಶ ಗಣಾರ್ಚಿತೆ 
ದಾಶರಥಿ ಹರಿ ವಾಸುದೇವ ಪದ 
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು 
 ಮೇಷಾಭಿನವ ಪ್ರಾಣೇಶವಿಠಲನ 
ದಾಸ್ಯತನವನಿತ್ತು ಪೋಷಿಸುವದೆಮ್ಮಾ ॥ 5 ॥

 ಜತೆ 

 ಅಜನಾಮಭಿನವ ಪ್ರಾಣೇಶವಿಠಲನ 
ನಿಜ ದಾಸನೆಂದೆನಿಸು ಸುಜನ ಪೋಷಕಳೆ ॥
**********


Another Version
Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತ  ಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ

ರಾಗ ರೇವತಿ  ಧ್ರುವತಾಳ

ಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |
ಕಮ್ಮಗೊಲನ ಜನನಿ ದಾಕ್ಷಾಯಿಣಿ |
ಸುಮನಸರಿಗೆ ಗತಿ ಕರುಣಾ ಪೂರಿತ ಪಾಂಗೆ |
ಕುಮನಸರಿಗತಿ ವಜ್ರಕಠಿಣಪಾಂಗೆ |
ರಮೆಯರಸನ ಪಾದ ಸುಮನಸ್ವಭೃಂಗೆ |
ಬೊಮ್ಮನ ಅಭಿನವ ಪ್ರಾಣೇಶವಿಠಲನ |
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ || 1 ||

ಮಟ್ಟತಾಳ

ಚಂಡಿದುರ್ಗೆ ಭೂತಗಣ ಸಂಸೇವಿತಳೆ |
ರುಂಡಾಹಿಮಾಲಾಧರ ಹೃನ್ಮಂದಿರಳೆ |
ಉಂಡು ವಿಷವ ನಿನ್ನ ಗಂಡನು ಬಳಲಿ |
ಕೈಕೊಂಡೌಷಧವೆನಗೆ |ಕರುಣದಿ ನೀಡಮ್ಮ |
ಮಂಡೆ ಬಾಗಿ ಬೇಡ್ವೇ |ಕರಗಳ ಜೋಡಿಸುತ |
ಪುಂಡರೀಕನಯನೆ ಪುಂಡರೀಕ ಗಮನೆ |
ಪಂಡರ ಅಭಿನವ ಪ್ರಾಣೇಶವಿಠಲನ |
ಪುಂಡರೀಕ ಚರಣ ಬಂಡುಣಿ ಎನಿಸಮ್ಮ || 2 ||

ತ್ರಿವಿಡಿತಾಳ

ಅರುಮೊಗನ ಪೆತ್ತ ಚಾರು ಚರಿತ್ರಳೆ |
ವಾರಣಾರಿ ವೃಕ್ಷ್ಯಶ್ಯಂದನಳೆ |
ಶ್ರೀರಜಪತಿ ರಾಮನಾಮ ಮಂತ್ರವ ಜಪಿಸಿ |
ಸರ್ವ ಮಂಗಳೆಯಾದ ಶರ್ವಾಣಿಯೆ |
ನಾರಿಯರಾಭಿಷ್ಟ ಪೂರೈಸುತವರಿಗೆ |
ವೀರಪತಿವ್ರತೆಧರ್ಮ ಮರ್ಮವ ತೋರಿದ |
ವಾರಿಜನಯನೇ ಮಂಗಳ ಗೌರಿಯೇ |
ಮಾರಮಣ ಅಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ || 3 ||

ಅಟ್ಟತಾಳ

ಹರಿಸರ್ವೋತ್ತಮನೆಂಬ ಸ್ಥಿರವಾದ ಜ್ಞಾನವ |
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ |
ದುರುಳ ದಾನವರಂತೆ ಪರಮೇಶ ಶಿವನೆಂದು |
ಪೆರಧರ ಪರನೆಂದು ನುಡಿಸದಿರೆಂದೆಂದು |
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖ ಮಾತೆ |
ಸಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣವಿರಜ ಭೃಂಗೆ ದೀನ ದಯಪಾಂಗೆ || 4 ||

ಅದಿತಾಳ

ಭಾಸುರ ಚರಿತಳೆ ಭೂಸುರ ವಿನುತಳೆ |
ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ |
ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು |
ಮೇಷ ಅಭಿನವ ಪ್ರಾಣೇಶ ವಿಠಲನ |
ದಾಸ್ಯತನವಿತ್ತು ಪೋಷಿಸುವದೆಮ್ಮಾ || 5 ||

ಜತೆ

ಅಜನಾಮ ಅಭಿನವ ಪ್ರಾಣೇಶ ವಿಠಲನ |
ನಿಜ ದಾಸನೆಂದೆನಿಸು ಸುಜನ ಪೋಷಕಳೆ || 6 ||
********