..
ಜಯ ಮಧ್ವವಲ್ಲಭ ಜಯಶುದ್ಧ ಸುಲ್ಲಭಜಯ ಪದ್ಮನಾಭ ಉಡುಪಿನಜಯ ಪದ್ಮನಾಭ ಉಡುಪಿನ ಶ್ರೀಕೃಷ್ಣಜಯ ದುರ್ಜನರಿಗೆ ಅತಿದೂರ ಸುವ್ವಿಸುವ್ವಿ ಸುವ್ವಾಲೆ ಪ.
ಸುರರ ಶಿರೋರನ್ನ ಗರುಡವಾಹನನೆ ಕರುಣಸಂಪನ್ನ ಉಡುಪಿನಕರುಣಸಂಪನ್ನ ಉಡುಪಿನ ಶ್ರೀಕೃಷ್ಣಶರಣಾಗು ಧನ್ಯ ಜನರಿಗೆ1
ಮೇಲೆ ಸತ್ಯಲೋಕ ಆಳುವ ಧೀರನೆಶ್ರೀಲೋಲನಂಘ್ರಿಭ್ರಮರನೆಶ್ರೀಲೋಲನಂಘ್ರಿಭ್ರಮರನೆ ಶ್ರೀಕೃಷ್ಣಶ್ರೀ ಮುಖ್ಯಪ್ರಾಣ ಭಾರತೀರಮಣಗೆ ಎರಗುವೆ 2
ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದಶ್ರೀಮಂತ ನಮ್ಮ ಹನುಮಂತಶ್ರೀಮಂತ ನಮ್ಮ ಹನುಮಂತನೆಂದವಗೆಕಾಮಿತಾರ್ಥಗಳ ಕೊಡುವನೆ 3
ಭಾರತ ಯುದ್ಧದಲಿ ಬಾಹುಬಲ ತೋರಿದಧಾರಿಣೀಶ್ವರ ತಿಲಕನೆಧಾರಿಣೀಶ್ವರ ತಿಲಕನೆ ಶ್ರೀ ಭೀಮಸಾರಿದ ಜನರ ಸಲಹುವ 4
ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು ಹೊದ್ದಿದ ಜನರ ಕರುಣದಲಿಹೊದ್ದಿದ ಜನರ ಕರುಣದಲಿ ಹೊರೆವ ಶ್ರೀಮಧ್ವಮುನಿಪನ ಭಜಿಸುವೆ 5
ಹರಿಯ ಸತ್ಕರದಲ್ಲಿ ಕರುಣಂಗಳೊಡನೆದುರುಳ ವಾದಿಗಳ ಗೆಲಿದನೆÀದುರುಳ ವಾದಿಗಳ ಗೆಲಿದನೆ ಹೃಷಿಕೇಶಗುರುಗಳಂಘ್ರಿಗೆ ನಮಿಸುವೆ 6
ದೇಶ ದೇಶದೊಳುಳ್ಳ ದೂಷಿವಾದಿಗಳನ್ನು ದೂಷಿಸಿ ಹರಿಯ ಮಹಿಮೆಯನುದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀನೃಸಿಂಹತೀರ್ಥಯತಿರಾಯ7
ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪಮಧ್ವಮಾರ್ಗವನು ಜಗಕೆಲ್ಲಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-ನಾರ್ದನತೀರ್ಥಯತಿರಾಯ8
ಇಂದಿರೆಯರಸನ ಎಂದೆಂದು ಪೂಜಿಸಿಮಂದಮಾಯಿಗಳ ಕುಮತವಮಂದಮಾಯಿಗಳ ಕುಮತವ ಗೆಲಿದ ಉ-ಪೇಂದ್ರÀತೀರ್ಥಯತಿರಾಯ9
ಈ ಮಹಿಯೊಳಗುಳ್ಳ ತಾಮಸ ಜನರನ್ನುಶ್ರೀಮಧ್ವ ಮುನಿಪನ್ನ ಮತದಿಂದಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿವಾಮನತೀರ್ಥರೆಸೆದರು 10
ಧೀರ ತಾಪಸರಾಗಿ ಗುರುಮಧ್ವಮುನಿಯಚಾರುಚರಣಂಗಳ ಪಿಡಿದಿರ್ದಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-ತೀರ್ಥರಡಿಗೆ ನಮಿಸುವೆ11
ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ
ಸ್ವಾಮಿ ಎಂಬುದನು ಜಗಕ್ಕೆಲ್ಲ
ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ
ರಾಮತೀರ್ಥಯತಿರಾಯ12
ಮನುಮಥನಯ್ಯನ ಘನತೆಯ ತೋರಿಸಿನರ ಮೋಹಗಳ ಬಿಡಿಸಿದಜನರ ಮೋಹಗಳ ಬಿಡಿಸಿದ ಅಧೋಕ್ಷಜಮುನಿಕುಲಾಗ್ರಣಿಗೆ ನಮಿಸುವೆ13
ಮಧ್ವಕಿಂಕರರಾದ ಪದ್ಮನಾಭಾರ್ಯರವಿದ್ಯಾವೈಭವಗಳ ಪೊಗಳುವವಿದ್ಯಾವೈಭವಗಳ ಪೊಗಳುವ ಕವಿಯಾರುಶುದ್ಧ ಮುನಿಗಳಿಗೆ ಅಳವಲ್ಲ 14
ಸ್ವದೇವ ಹಯವದನನ ಆವಾಗ ಪೂಜಿಪ ಪಾವನ್ನ ಮಧ್ವಮುನಿಪನಪಾವನ್ನ ಮಧ್ವಮುನಿಪನ ಶಿಷ್ಯರಾದದೇವತೆಗಳ ಮರೆಹೊಕ್ಕೆ 15
***