sung as hayavadana ankita
CHECK
similar song in purandara vittala ankita
ಫಲಾಹಾರವ ಮಾಡೊ ಪರಮಪುರುಷನೆ
ಲಲನೆ ಲಕುಮಿಯ ಕರಕಂಜದಿಂದ ಪ.
ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ
ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು
ಮಧುರಮಾವು ಮಾದಳ ತೆಂಗಿನಕಾಯಿ
ತುದಿಮೊದಲಾದ ಪರಿಪರಿ ಫಲಗಳು 1
ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ
ಮತ್ತಾದ ತುಮರೆ ಪರಗಿ ಕಾರೆ ಕವಳಿ
ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು
ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2
ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು
ಸಾಲುರಸಾಯನ ಸವಿಯೆಳನೀರು
ಮೂಲೋಕದೊಡೆಯ ಹಯವದನ ವೆಂಕಟರೇಯ
ಪಾಲಿಸೊ ಲಕುಮಿಯ ಕರಕಂಜದಿಂದ 3
***