Showing posts with label ಏತರ ಚೆಲುವ ರಂಗಯ್ಯ purandara vittala ETARA CHELUVA RANGAYYA. Show all posts
Showing posts with label ಏತರ ಚೆಲುವ ರಂಗಯ್ಯ purandara vittala ETARA CHELUVA RANGAYYA. Show all posts

Thursday, 2 December 2021

ಏತರ ಚೆಲುವ ರಂಗಯ್ಯ purandara vittala ETARA CHELUVA RANGAYYA





ಏತರ ಚೆಲುವ ರಂಗಯ್ಯ (, ಇನ್ನೇತರ ಚೆಲುವ )||ಪ||

ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ ||ಅ||

ದೇಶಕೋಶಗಳುಳ್ಳೊಡೆ ತಾ ಕ್ಷೀರದ
ರಾಶಿಯೊಳಗೆ ಮನೆ ಕಟ್ಟುವನೆ
ಹಾಸುವುದಕೆ ಹಾಸಿಗೆಯುಳ್ಳೊಡೆ ತಾ
ಶೇಷನ ಬೆನ್ನಿಲಿ ಮಲಗುವನೆ ರಂಗ ||

ಬುದ್ಧಿಯ ಪೇಳುವ ಪಿತನುಳ್ಳೊಡೆ ಬೆಣ್ಣೆ
ಕದ್ದು ಚೋರನೆಂದೆನಿಸುವನೆ
ಬದ್ಧವಾಹನ ತನಗಿದ್ದರೆ ಹಾರುವ
ಹದ್ದಿನ ಮೇಲೇರಿ ತಿರುಗುವನೆ ರಂಗ ||

ಹಡೆದ ತಾಯಿ ತನಗುಳ್ಳೊಡೆ ಗೋಪರ
ಒಡಗೂಡಿ ತುರುವಿಂಡು ಕಾಯುವನೆ
ಮಡದಿಯು ಉಳ್ಳೊಡೆ ಅಡವಿಯೊಳಾಡುವ
ಹುಡುಗಿಯರ ಸಂಗ ಮಾಡುವನೆ ರಂಗ ||

ಸಂಗಡ ಉದಿಸಿದ ಅಣ್ಣನಿದ್ದರೆ ನರ-
ಸಿಂಗನ ರೂಪವ ಧರಿಸುವನೆ
ಅಂಗದ ಮೇಲಿನ ಆಸೆಯಿದ್ದೊಡೆ
ಕಾಳಿಂಗನ ಮಡುವಿಲಿ ಧುಮುಕುವನೆ ರಂಗ ||

ಗತಿಯುಳ್ಳೊಡೆ ರಕ್ಷಃಪತಿಯೆಡೆಗೈದಿ ತಾ
ಕ್ಷಿತಿಯ ದಾನವನು ಬೇಡುವನೆ
ಮತಿವಂತ ಪುರಂದರವಿಠಲರಾಯನ
ಪತಿತಪಾವನನೆಂದು ತುತಿಸಿದೆನಲ್ಲದೆ ||
***

ರಾಗ ಕೇದಾರಗೌಳ. ಛಾಪು ತಾಳ (raga tala may differ in audio)

pallavi

Etara celuva rangayya

anupallavi

hariyemba mAtige maruLAdenallade

caraNam 1

dEshakOshagaLuLLaDe tA kSIrada rAshiyoLage mane kaTTuvane
hAsuvudake hAsigeyuLLaDe tA shESana bennisi malaguvane ranga

caraNam 2

buddhiya pELuva pitanuLLaDe beNNe kaddu cOranendenisuvane
baddha vAhana tanagiddare hAruva haddina mElEri tiruguvane ranga

caraNam 3

haDeda tAyi tanaguLLaDe gOpara Oda gUDi turuviNDu kAyuvane
maDadiyu uLLaDe aDaviyoLADuva huDugiyara sanga mADuvane ranga

caraNam 4

sankaTa udisida aNNaniddare narasingana rUpava dharisuvane
angada mElina AseyiddoDe kALingana maDuvili dhumukuvane ranga

caraNam 5

satiyuLLaDe rakSaha patiyeDekaidi tA kSitiya tAnavanu bEDuvane
mativanda purandara viTTala rAyana patita pAvananendu tutisisidenallade
***