ಹಿಡಿ ಕೇಶವ ಕೃಷ್ಣ ನಾರಾಯಣನ
ಕೊಡು ಮಾಧವ ಗೋವಿಂದ ವಿಷ್ಣುನ್ನ
ಕಡಲಶÀಯನನಾದ ತಕ್ಕೊ ಮಧುಸೂದನನ
ಕಡುಬ್ಯಾಗದಲಿ ತಾರೆ ತ್ರಿವಿಕ್ರಮನ ಜೋ ಜೋ 1
ವಾಮನ ಶ್ರೀಧರ ಹೃಷಿಕೇಶÀನ
ಕಾಮಿಸಿ ನೀ ಕೊಳ್ಳೆ ಪದ್ಮನಾಭನ್ನ
ದಾಮೋದರ ಶ್ರೀ ಸಂಕರುಷಣನ
ಕೋಮಲಾಂಗಿ ತಾರೆ ವಾಸುದೇವನ್ನ ಜೋ ಜೋ 2
ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮನ
ಮುದ್ದು ಅಧೋಕ್ಷಜ ನಾರಸಿಂಹಾಚ್ಯುತನ
ಸದ್ಯೋಜನಾದರ್Àನ್ನ ಕೊಂಡು ಉಪೇಂದ್ರನ್ನ
ಸದ್ಯ ತಾರ್ಹರಿ ಭೀಮೇಶಕೃಷ್ಣನ ಜೋ ಜೋ 3
***