Showing posts with label ದಯೆಮಾಡಿ ಸಲಹಯ್ಯ ಭಯನಿವಾರಣನೆ 2 purandara vittala. Show all posts
Showing posts with label ದಯೆಮಾಡಿ ಸಲಹಯ್ಯ ಭಯನಿವಾರಣನೆ 2 purandara vittala. Show all posts

Thursday, 5 December 2019

ದಯೆಮಾಡಿ ಸಲಹಯ್ಯ ಭಯನಿವಾರಣನೆ 2 purandara vittala

Sorry Sripadaraja has this song written.  Cannot ascertain about this one.
ಪುರಂದರದಾಸರು
ದಯೆಮಾಡಿ ಸಲಹಯ್ಯ ಭಯನಿವಾರಣನೆ |ಹಯವದನ ನಾ ನಿನ್ನಚರಣನಂಬಿದೆ ಕೃಷ್ಣಪ

ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ |ಎಣಿಸಲಳವಲ್ಲಷ್ಟು ಇಷ್ಟು ಎಂದು ||ಫಣಿಶಾಹಿ ಅವಗುಣವ ನೋಡದೇಚರಣಸ್ಮ-ರಣೆಯ ಮಾಡುವಂಥ ಭಕುತಿಯನಿತ್ತು 1

ಕಂಡ ಕಂಡ ಕಡೆಗೆ ಪೋಪ ಚಂಚಲಮನಸುಲಂಡತನದಲಿ ಬಹಳ ಭ್ರಷ್ಟ ನಾನು ||ಭಂಡಾಟದವನೆಂದು ಬಹಿರಂಗಕೆಳೆಯದೆ |ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ 2

ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು |ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ||ಖ್ಯಾತಿಯನುಕೇಳಿಮೊರೆಹೊಕ್ಕೆ ದಯಾನಿಧಿಯೆ -ಬೆ-|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ 3
******