ಬಾರಯ್ಯ ಬೇಗ ಭಾವಜನಯ್ಯ ನಿನಗೊಲಿದ
ನಾರಿಯರುಗಳ ಲಾಲಿಸೋ ಪ
ಇಂದೀವರಾಯತಾಕ್ಷಿಯೊಳು ತಾ ಮುನಿದಿರಲು
ಕಂದರ್ಪಣೆರಾಯ ಕೇಳಿ ತನ್ನ
ಚಂದಿರನು ದಳಪತಿಗೆ ನೇಮವನು ಕೊಟ್ಟು ನಲ-
ವಿಂದ ಗಿಳಿತೇರನೇರಿ ಬರಲೂ
ಮುಂದೆ ಉಗ್ಘಡದ ಕೋಗಿಲೆ ಪಾಡಿ ರಭಸ-
ದಿಂದ ವಾದ್ಯಗಳು ಮೊಳಗೇ
ಸಂದಣಿಸಿ ಝೇಂಕಾರಗೈದ ಭ್ರಮರಾಳಿಗಳ
ವೃಂದದವರನೆಂತು ಬಣ್ಣಿಸುವರೆನ್ನಳವಲ್ಲ 1
ಅಗ್ಗದ ವಸಂತ ಮಾರುತರು
ಒಗ್ಗಿ ನಲಿದಾಡುತ್ತ ಬರಲು
ವೆಗ್ಗಳ ಸುಗಂಧ ಪರಿಮಳದ ಪೂವಲರುಗಳ
ಒಗ್ಗಿನಲಿ ಕೂಡೆ ಬರಲೂ ತನ್ನ
ಕಗ್ಗೊಲೆಗೆ ದಾಳಿಯಿಟ್ಟುದು ಕಾಮ ಪುಸಿಯಲ್ಲ
ದಗ್ಗಡೆಯ ಮಾಡುವುದುಚಿತವೆ ನಿನ್ನ ಸಖಿಯಳನೂ 2
ಈ ತೆರದೊಳಿಹ ಪ ಕೊಳುವಳ್ ಕಳ
ರಳ್ತೆ ಸಂಜೆ ಭಟರೊಗ್ಗಿನಲಿ ಭಾರಿಯಾಗಿ ಲಲೂ
ಮತ್ತೆ ಕೆಂದಳಿರ ಸಂಪಗೆಯ ಕಿಡಿಯಲರುಗಳು
ಒತ್ತಿ ಸೂಸುತ್ತ ಬರಲೂ ತನ್ನ
ಬತ್ತಳಿಕೆಯೊಳಗೊಂದು ಕೂರಲಗ ತೆಗೆ
ದಿತ್ತು ಅವಳ ಕುಸುಮಾಂಗಕೆ ಎಸೆಯಲು ಕಂಡು
ವೃತ್ತ ಕುಚದಬಲೆಯಳ ಮನ್ನಿಸದೆ ಸುರಪುರದ
ಸುತ ಲಕ್ಷ್ಮೀಶನಹುದೆ ಭಳಿರೇ 3
****